ಆನ್ ಲೈನ್ ನಲ್ಲಿ ಯಾವುದೋ ಫುಡ್ ಆರ್ಡರ್ ಮಾಡಿ ಮನೆಗೆ ಬರುತ್ತದೆ ಎಂದು ಕಾಯುತ್ತ ಕುಳಿತಿರುತ್ತೀರಿ. ಡಿಲೆವರಿ ಬಾಯ್ ನಿಮ್ಮ ಹಸಿವನ್ನು ತಣಿಸಲು ಆರ್ಡರ್ ತಲುಪಿಸುತ್ತಾನೆ. ಆದರೆ ಬಂದ ಆಹಾರ ನೀವು ಎಣಿಸಿದ್ದಕ್ಕಿಂತ ಕಡಿಮೆ ಇದ್ದರೆ? ಇಲ್ಲೊಬ್ಬ ಡಿಲೆವರಿ ಬಾಯ್ ಇದ್ದಾನೆ.. ಪಕ್ಕಾ ಹೊಟ್ಟೆ ಬಾಕ..

ಮೆಲ್ಬೋರ್ನ್(ಅ.6) ಆರ್ಡರ್ ಮಾಡಿದ ಫುಡ್ ನ್ನು ಮನೆ ಬಾಗಿಲಿಗೆ ತಂದವ ಮನೆಯ ಬೆಲ್ ಮಾಡಿದ್ದಾನೆ. ಸ್ವಲ್ಪ ಹೊತ್ತು ಕಾಯಬೇಕು ಎಂದು ಗೊತ್ತಿರುತ್ತದೆ. ಈ ಅವಕಾಶದಲ್ಲಿ ಗ್ರಾಹಕರಿಗೆ ನೀಡುವ ಮುನ್ನ ಆಹಾರದ ಪ್ಯಾಕೇಟಿಗೆ ಕೈ ಹಾಕಿ ತಿಂದಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈತನ ಬಾಯಿ ಚಪಲಕ್ಕೆ ಅರ್ಧ ಚಿಪ್ಸ್ ಗಳು ಮಂಗಮಾಯವಾಗಿವೆ. ಉಬರ್ ಇಟ್ಸ್ ನ ಡಿಲೆವರಿ ಬಾಯ್ ಆಹಾರ ಕದ್ದು ತಿನ್ನುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ಕಂಪನಿ ಈ ಆರೋಪವವನ್ನು ತಿರಸ್ಕಾರ ಮಾಡಿದ್ದು ನಮ್ಮಿಂದ ಯಾವುದೇ ತಪ್ಪಾಗಿಲ್ಲ ಎಂದು ಹೇಳಿದೆ.

ಅದು ಏನೇ ಇರಲಿ ಈ ತಿಂಡಿಬಾಕ ಡಿಲೆವರಿ ಬಾಯ್ ಬಾಯಿ ಚಪಲ ನೀವು ನೋಡಿಕೊಂಡು ಬನ್ನಿ....