ಬೀಜಿಂಗ್(ಸೆ.12): ಕೆಲವರಿಗೆ ತುಂಬಾ ಹೊತ್ತು ಉಯ್ಯಾಲೆ ಆಡಿದರೆ ತಲೆ ಸುತ್ತು ಬರುವಂತೆ ಆಗುತ್ತದೆ. ಇನ್ನೂ ಕೆಲವರಿಗೆ ಎತ್ತರದ ಜಾಗದಲ್ಲಿ ನಿಂತು ಕೆಳಗೆ ನೋಡಿದರೆ ತಲೆ ಗಿರ್ರನೆ ತಿರುಗುತ್ತೆ. ಇನ್ನು ಇವೆರಡೂ ಒಟ್ಟಿಗೆ ಆದರೆ ಹೇಗಾಗಬೇಡ.
ಚೀನಾದಲ್ಲಿ ಪ್ರವಾಸಿಗರೊಬ್ಬರು ಪ್ರಪಾತದಿಂದ 984 ಅಡಿ ಎತ್ತರದಲ್ಲಿ ನಿರ್ಮಿಸಲಾದ ಪ್ಲಾಟ್ಫಾರ್ಮ್ನ ಮೇಲೆ ಉಯ್ಯಾಲೆ ಆಡಿರುವ ವಿಡಿಯೋ ನೋಡುಗರ ಹುಬ್ಬೇರುವಂತೆ ಮಾಡಿದೆ. ಇಲ್ಲಿನ ಚಾಂಗ್ಕಿಂಗ್ನ ವ್ಯಾನ್ಶೆಂಗ್ ಒರ್ಡೊವಿಶಿಯನ್ ಥೀಮ್ ಪಾರ್ಕ್ನಲ್ಲಿ ಪ್ರವಾಸಿಗರಿಗಾಗಿ ಈ ಉಯ್ಯಾಲೆ ಹಾಕಲಾಗಿದೆ.
