ಲೈವ್ ಚ್ಯಾಟ್'ನಲ್ಲಿ ಅಭಿಮಾನಿಯೊಬ್ಬ ಕೇಳಿಯೇಬಿಟ್ಟ, "ನಿಮ್ಮ ಸ್ತನದ ಗಾತ್ರ ಎಷ್ಟು..?"
ಬೆಂಗಳೂರು: ನಟಿಯರೆಂದರೆ ಜನರಲ್ಲಿ ಪೂರ್ವಗ್ರಹ ಮನೋಭಾವನೆ ಮನೆ ಮಾಡಿರುತ್ತದೆ. ಗ್ಲಾಮರ್'ಗಷ್ಟೇ ಅವರನ್ನು ಸೀಮಿತಗೊಳಿಸುತ್ತಾರೆ. ಇದಕ್ಕೆ ಒಂದು ಪಕ್ಕಾ ನಿದರ್ಶನವೆನಿಸಿದ್ದು ಟಾಲಿವುಡ್ ನಟಿ ಶ್ರವ್ಯಾ ರೆಡ್ಡಿ. ಸೋಷಿಯಲ್ ಮೀಡಿಯಾದಲ್ಲಿ ಈಕೆ ಲೈವ್ ಚ್ಯಾಟ್ ನಡೆಸಿದ್ದ ವಿಡಿಯೋವೊಂದು ಇಂಟರ್ನೆಟ್'ನಲ್ಲಿ ಭಾರೀ ವೈರಲ್ ಆಗಿದೆ. ಪ್ರಧಾನಿ ಮೋದಿಯವರು ನೋಟ್ ಬ್ಯಾನ್ ಮಾಡಿದ ನಿರ್ಧಾರದ ಬಗ್ಗೆ ತಮ್ಮ ಅಭಿಮಾನಿಗಳೊಂದಿಗೆ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದ ನಟಿ ಶ್ರಾವ್ಯಾಗೆ ಅಚಾನಕ್ ಆಗಿ ವಿಚಿತ್ರ ಪ್ರಶ್ನೆಯೊಂದು ಎದುರಾಯಿತು.
ಲೈವ್ ಚ್ಯಾಟ್'ನಲ್ಲಿ ಅಭಿಮಾನಿಯೊಬ್ಬ ಕೇಳಿಯೇಬಿಟ್ಟ, "ನಿಮ್ಮ ಸ್ತನದ ಗಾತ್ರ ಎಷ್ಟು..?". ಮೋದಿ ನಿರ್ಧಾರದಿಂದ ದೇಶಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳುತ್ತಿದ್ದ ನಟಿ, ಈ ಪ್ರಶ್ನೆ ಕಂಡೊಡನೆಯೇ ಕೆಂಡಾಮಂಡಲವಾಗಿಬಿಟ್ಟಳು. "ಹೋಗಿ ನಿಮ್ಮ ಅಮ್ಮನನ್ನು ಕೇಳಿ" ಎಂದು ಖಾರವಾಗಿ ಉತ್ತರ ಕೊಡುತ್ತಾಳೆ.
"ನಿಮ್ಮಂಥವರಿಂದಲೇ ನಮ್ಮ ದೇಶಕ್ಕೆ ಈ ಗತಿ ಬಂದಿದೆ. ಇಲ್ಲಿ ನಾನು ಗಂಭೀರ ವಿಷಯದ ಬಗ್ಗೆ ಚರ್ಚಿಸುತ್ತಿದ್ದೇನೆ. ನೀವು ನೋಡಿದರೆ ನನ್ನ ದೇಹದ ಮೇಲೆ ಗಮನ ಹರಿಸುತ್ತಿದ್ದೀರಿ. ನಾನಿಲ್ಲಿ ಬಾಡಿ ಶೋ ಮಾಡಲು ಬಂದಿಲ್ಲ. ಫ..ಆಫ್... ನಾನು ಕೆಟ್ಟ ಭಾಷೆ ಬಳಸುತ್ತಿದ್ದೇನೆ. ಆದರೆ, ನೀವು ಕೇಳುತ್ತಿರುವ ಪ್ರಶ್ನೆ ನೋಡಿ ಎಂಥದ್ದು..!" ಎಂದು ಶ್ರಾವ್ಯಾ ರೆಡ್ಡಿ ಜಬರದಸ್ತಾಗಿ ಮಾತನಾಡುತ್ತಾಳೆ.

