ಭೋಪಾಲ್(ಸೆ.27)  ಪ್ರೊಫೆಸರ್ ತಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರು. ಈ ವೇಳೆ ಒಳಗ್ಗೆ ನುಗ್ಗಿದ ಎಬಿವಿಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಲು ಕಾಲೇಜಿನ ಕಾರಿಡಾರ್ ನಲ್ಲಿ ತೆರಳುತ್ತಿದ್ದರು.

ಪಾಠ ಮಾಡುತ್ತಿದ್ದ ದಿನೇಶ್ ಗುಪ್ತಾ ಹೊರಗೆ ಬಂದು ಘೋಷಣೆ ಕೂಗದಂತೆ ಕಾರ್ಯಕರ್ತರ ಬಳಿ ಮನವಿ ಮಾಡಿದ್ದಾರೆ. ಕೂಗುತ್ತಲೇ ಮುಂದೆ ಹೋಗುತ್ತಿದ್ದವರನ್ನು ತಡೆಯುವ ಯತ್ನ ಮಾಡಿದ್ದು ಕ್ಲಾಸ್ ತೆಗೆದುಕೊಳ್ಳಲು ತೊಂದರೆಯಾಗುತ್ತದೆ ಎಂದು ಅವರ ಕಾಲಿಗೆ ಬೀಳಲು ಹೋಗಿದ್ದಾರೆ.

ಕಾಲೇಜಿನ  ನಾಲ್ಕನೇ ಸೆಮಿಸ್ಟರ್ ವಿಜ್ಞಾನ ವಿಷಯದ ಫಲಿತಾಂಶ ವಿಳಂಬ ಆಗಿದ್ದಕ್ಕೆ ಎಬಿವಿಪಿ ಕಾರ್ಯಕರ್ತರು ಘೋಷಣೆ ಕೂಗುತ್ತ ಕಾಲೇಜಿಗೆ ಆಗಮಿಸಿದ್ದರು. ಈ ವೇಳೆ ಒಳಗೆ ಕ್ಲಾಸ್ ನಡೆಸುತ್ತಿದ್ದ ಪ್ರೋಫೆಸರ್ ಹೊರಗೆ ಬಂದಿದ್ದಲ್ಲೇ 'ಒಂದೇ ಮಾತರಂ' ಮತ್ತು 'ಭಾರತ್ ಮಾತಾ ಕಿ ಜೈ’ ಘೋಷಣೆ ಕೂಗಿಯೂ ಅವರನ್ನು ನಿಲ್ಲಿಸುವ ಯತ್ನ ಮಾಡಿದ್ದಾರೆ. ಇದಾದ ಮೇಲೆ ಪ್ರೋಫೆಸರ್ ದೀರ್ಘ ಕಾಲದ ರಜೆಯ ಮೇಲೆ ಹೋಗಿದ್ದಾರೆ. ಎಬಿವಿಪಿ ಪ್ರೋಫೆಸರ್ ಅವರನ್ನು ದೇಶದ್ರೋಹಿ ಎಂದು ಕರೆದಿದೆ.