ಬಂಟ್ವಾಳ ಗ್ರಾಮಾಂತರ ಠಾಣೆಯ ಎಎಸ್​ಐ ರುಕ್ಮಯ್ಯ ಗೌಡ ಅವರು ತಮ್ಮ ಕೊಂಕಣಪದವು ಎಂಬಲ್ಲಿ ಇರುವ ಜಮೀನಿನಲ್ಲಿ ಈ ವಾಗ್ವಾದಲ್ಲಿ ಭಾಗಿಯಾಗಿದ್ದಾರೆ. ಈ ಜಮೀನಿಗೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಲಾಗಿದೆ ಎಂದು ರುಕ್ಮಯ್ಯ ಗೌಡರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಈ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಜಮೀನಿಗೆ ನುಗ್ಗಬಹುದು ಎಂಬ ಕಾರಣಕ್ಕೆ ಕೈಯಲ್ಲಿ ಕತ್ತಿ ಹಿಡಿದುಕೊಂಡೇ ಎಎಸ್​'ಐ ವಾಗ್ವಾದದಲ್ಲಿ ನಿರತಾಗಿದ್ದರು.

ಮಂಗಳೂರು(ಅ.09): ಬಂಟ್ವಾಳ ತಾಲೂಕಿನ ವಿಟ್ಲದ ಪೆರಾಜೆ ಗ್ರಾಮದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸ್ಥಳೀಯರ ಜೊತೆ ವಾಗ್ವಾದ ನಡೆಸಿದ ದೃಶ್ಯ ಮೊಬೈಲ್'​ನಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.

ಬಂಟ್ವಾಳ ಗ್ರಾಮಾಂತರ ಠಾಣೆಯ ಎಎಸ್​ಐ ರುಕ್ಮಯ್ಯ ಗೌಡ ಅವರು ತಮ್ಮ ಕೊಂಕಣಪದವು ಎಂಬಲ್ಲಿ ಇರುವ ಜಮೀನಿನಲ್ಲಿ ಈ ವಾಗ್ವಾದಲ್ಲಿ ಭಾಗಿಯಾಗಿದ್ದಾರೆ. ಈ ಜಮೀನಿಗೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಲಾಗಿದೆ ಎಂದು ರುಕ್ಮಯ್ಯ ಗೌಡರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಈ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಜಮೀನಿಗೆ ನುಗ್ಗಬಹುದು ಎಂಬ ಕಾರಣಕ್ಕೆ ಕೈಯಲ್ಲಿ ಕತ್ತಿ ಹಿಡಿದುಕೊಂಡೇ ಎಎಸ್​'ಐ ವಾಗ್ವಾದದಲ್ಲಿ ನಿರತಾಗಿದ್ದರು.

ಈ ಕುರಿತ ದೃಶ್ಯ ವಾಟ್ಸ್​'ಆಪ್​'ನಲ್ಲಿ ಹರಿದಾಡುತ್ತಿದ್ದು, ಎಸ್​ಪಿ ಭೂಷಣ್ ಬೊರಸೆ ಅವರಿಗೂ ದೂರು ನೀಡಲಾಗಿದೆ. ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿರುವ ಎಸ್​ಪಿ ಬೊರಸೆ, ತನಿಖೆಯ ಜವಾಬ್ದಾರಿಯನ್ನು ಡಿವೈಎಸ್​ಪಿ ರವೀಶ್​​ ಅವರಿಗೆ ವಹಿಸಿದ್ದಾರೆ.