ನನ್ನ ಹೆಸರು ಬಳಸಿ ಅವಾಚ್ಯವಾಗಿ ನಿಂದಿಸಿದವರ ವಿರುದ್ಧ ಕ್ರಮ : ಡಿಕೆಶಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 23, Jul 2018, 9:41 AM IST
victoria hospital doctor abuse Case  We Take Serious Action Says of dk shivakumar
Highlights

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನರ್ಸ್ ಗಳಿಗೆ ವೈದ್ಯಾಧಿಕಾರಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ತಮ್ಮ ಹೆಸರನ್ನು ಬಳಕೆ ಮಾಡಿಕೊಂಡವರ  ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. 

ಬೆಂಗಳೂರು :  ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಸೆಂಟರ್‌ನ ಶುಶ್ರೂಷಕಿಗೆ ವೈದ್ಯಾಧಿಕಾರಿ ಡಾ.ಬಾಲಾಜಿ ಪೈ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಪ್ರಕರಣದ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಕಿಡಿ ಕಾರಿದ್ದಾರೆ. ತಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಮಾತನಾಡುವವರನ್ನು ನಾನು ಬಿಡು ವುದಿಲ್ಲ ಎಂದಿದ್ದಾರೆ. 

ಇಲಾಖೆಯಲ್ಲಿ ಏನು ನಡೆಯು ತ್ತಿದೆ ಯಾರು ಏನು ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು. ಶುಶ್ರೂಷಕಿಗೆ ನಿಂದಿಸಿದ್ದ ಡಾ.ಬಾಲಾಜಿ: ವಿಕ್ಟೋ ರಿಯಾ ಆಸ್ಪತ್ರೆ ಟ್ರಾಮಾ ಸೆಂಟರ್‌ನ ವೈದ್ಯಾಧಿಕಾರಿ ಡಾ.ಬಾಲಾಜಿ ಪೈ ಅವಾಚ್ಯ ಶಬ್ದಗಳಿಂದ ಶುಶ್ರೂಷಕಿ ಯನ್ನು ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಡೀನ್ ಆದೇಶದ ಮೇರೆಗೆ ಟ್ರಾಮಾ ಕೇರ್ ಸೆಂಟರ್‌ನ ದಾಖಲೆಗಳ ಪರಿಶೀಲನೆಗೆ ವೈದ್ಯಾಧಿಕಾರಿಯೊಬ್ಬ ರು ಟ್ರಾಮಾ ಸೆಂಟರ್‌ಗೆ ಬಂದಿದ್ದರು. ಈ ವೇಳೆ ಶುಶ್ರೂಷಕಿ ಪರಿಶೀಲನೆಗೆ ಕೇಳಿದ ದಾಖಲೆಗಳನ್ನು ನೀಡಿದ್ದರು. 

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಡಾ.ಬಾಲಾಜಿ ಪೈ, ತನ್ನ ಗಮನಕ್ಕೆ ತಾರದೆ ದಾಖಲೆಗಳನ್ನು ನೀಡಿ ದ್ದಕ್ಕೆ ಕೆಂಡಾ ಮಂಡಲರಾಗಿದ್ದಾರೆ. ಆಕ್ರೋಶ ಹೊರಹಾಕಿದ ಬಾಲಾಜಿ, ಅವರು ಕೇಳಿದ್ರೂ ಅಂತ ಎಲ್ಲವನ್ನೂ ಕೊಡುವುದಕ್ಕೆ ನಿನಗೆ ಮಾನ ಮರ್ಯಾದೆ ಇಲ್ಲವೇ? ನಾಳೆ ಸಚಿವ ಡಿ. ಕೆ.ಶಿವಕುಮಾರ್ ಬಂದು ಬಾಲಾಜಿ ಎರಡು ಸ್ಟಾಫ್‌ನರ್ಸ್ ರೇಪ್ ಮಾಡಿ ಅಂತಾರೆ, ಆಗ ನೀವು ರೇಪ್ ಮಾಡಿಸಿಕೊಳ್ತೀರಾ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದರು ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಶುಶ್ರೂಷಕಿ ಸುರೇಖಾ ಬೆಂಗಳೂರು ಮೆಡಿಕಲ್ ಕಾಲೇಜು ಡೀನ್‌ಗೆ ಲಿಖಿತ ದೂರು ನೀಡಿದ್ದಾರೆ.

loader