ನ್‌ಡಿಎಗೆ ಅಣ್ಣಾಡಿಎಂಕೆ, ಟಿಆರ್‌ಎಸ್, ವೈಎಸ್ಸಾರ್ ಕಾಂಗ್ರೆಸ್ ಕೂಡ ಬಿಜೆಪಿಯನ್ನುಬೆಂಬಲಿಸಿವೆ. ಈ ಪಕ್ಷಗಳು ಲೋಕಸಭೆಯಲ್ಲಿ 50 ಹಾಗೂ ರಾಜ್ಯಸಭೆಯಲ್ಲಿ 12 ಸೀಟು ಹೊಂದಿವೆ.

ರಾಷ್ಟ್ರಪತಿ ಚುನಾವಣೆ ಬೆನ್ನಲ್ಲೇ ಬಹುನಿರೀಕ್ಷಿತ ಉಪರಾಷ್ಟ್ರಪತಿ ಚುನಾವಣೆ ಶನಿವಾರ ನಡೆಯಲಿದೆ. 

ಎನ್‌ಡಿಎ ಅಭ್ಯರ್ಥಿ ಎಂ. ವೆಂಕಯ್ಯ ನಾಯ್ಡು ಹಾಗೂ ವಿಪಕ್ಷಗಳ ಅಭ್ಯರ್ಥಿ ಗೋಪಾಲಕೃಷ್ಣಗಾಂಧಿ ಅವರ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

 ಶನಿವಾರ ಸಂಜೆಯೇ ಫಲಿತಾಂಶ ಕೂಡಾ ಪ್ರಕಟವಾಗಲಿದೆ.ಉಪರಾಷ್ಟ್ರಪತಿ ಚುನಾವಣೆಯಲ್ಲಿ ಕೇವಲ ಲೋಕಸಭೆ ಮ್ತು ರಾಜ್ಯಸಭೆ ಸದಸ್ಯರಿಗೆ ಮಾತ್ರ ಮತ ಚಲಾಯಿಸುವ ಅಧಿಕಾರವಿದೆ. 
ಒಟ್ಟು 790 ಸದಸ್ಯರು ಮತ ಚಲಾಯಿಸಬೇಕಿದೆ. ಆದರೆಈಗಾಗಲೇ 484 ಸದಸ್ಯರು ನಾಯ್ಡುಗೆ ಬಹಿರಂಗ ಬೆಂಬಲ ಸೂದ್ದಾರೆ. ಹೀಗಾಗಿ ಈ ಚುನಾವಣೆ ಕೇವಲ ಔಪಚಾರಿಕವಾದಂತಾಗಿದೆ. 
ಲೋಕಸಭೆಯಲ್ಲಿ 337ಹಾಗೂ ರಾಜ್ಯಸಭೆಯಲ್ಲಿ 80 ಸದಸ್ಯರನ್ನು ಎನ್‌ಡಿಎ ಹೊಂದಿದೆ. ಇನ್ನು ಎನ್‌ಡಿಎಗೆ ಅಣ್ಣಾಡಿಎಂಕೆ, ಟಿಆರ್‌ಎಸ್, ವೈಎಸ್ಸಾರ್ ಕಾಂಗ್ರೆಸ್ ಕೂಡ ಬಿಜೆಪಿಯನ್ನುಬೆಂಬಲಿಸಿವೆ.ಈ ಪಕ್ಷಗಳು ಲೋಕಸಭೆಯಲ್ಲಿ 50 ಹಾಗೂ ರಾಜ್ಯಸಭೆಯಲ್ಲಿ 12 ಸೀಟು ಹೊಂದಿವೆ.
ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರು ಮಹಾತ್ಮಾ ಗಾಂಧೀಜಿ ಅವರ ಮೊಮ್ಮಗನಾದರೆ, ವೆಂಕಯ್ಯ ನಾಯ್ಡು ಅವರು ಮಾಜಿ ಕೇಂದ್ರ ಸಚಿವರು.
ಹಾಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಅವಧಿ ಆಗಸ್ಟ್ 11ಕ್ಕೆ ಅಂತ್ಯಗೊಳ್ಳಲಿದೆ. ಉಪರಾಷ್ಟ್ರಪತಿಗಳು ರಾಜ್ಯಸಭೆಯ ಸಭಾಪತಿಯಾಗಿಯೂ ಕಾರ್ಯನಿರ್ವಹಿಸುತ್ತಾರೆ.