2012 ರಲ್ಲಿ ಹೊರತುಪಡಿಸಿ ಮಿಕ್ಕ ಅವಧಿಯಲ್ಲೆಲ್ಲಾ ಅಯೋಧ್ಯೆಯಲ್ಲಿ ಬಿಜೆಪಿ ಶಾಸಕರೇ ಆಯ್ಕೆಯಾಗಿದ್ದಾರೆ.
ಅಯೋಧ್ಯೆ(ಫೆ.23): ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಮಾಡಲು ಸಿದ್ಧತೆಗಳು ನಡೆಯುತ್ತಿದ್ದು, ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದ ನಾಲ್ಕೇ ತಿಂಗಳಲ್ಲಿ ರಾಮಮಂದಿರ ತಲೆ ಎತ್ತಲಿದೆ ಎಂದು ವಿಶ್ವ ಹಿಂದು ಪರಿಷತ್ (ವಿಎಚ್'ಪಿ) ಹೇಳಿಕೊಂಡಿದೆ.
ಅಯೋಧ್ಯೆ ಕ್ಷೇತ್ರಕ್ಕೆ ಫೆ.27ರಂದು ವಿಧಾನಸಭೆ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ವಿಎಚ್‌ಪಿ ಅಯೋಧ್ಯ ಘಟಕದ ಮುಖ್ಯಸ್ಥ ಸುದರ್ಶನ್ ಮಹಾರಾಜ್ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.
ವಿವಾದಿತ ರಾಮಜನ್ಮಭೂಮಿ ಹಿಂದು- ಮುಸ್ಲಿಮರಿಗೆ ಸೇರಿದ್ದು ಎಂದು 2010ರಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಇದರ ವಿರುದ್ಧ ಸಲ್ಲಿಕೆಯಾಗಿದ್ದ ಮೇಲ್ಮನವಿಗಳನ್ನು ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಹೈಕೋರ್ಟ್ ತೀರ್ಪಿಗೆ ತಡೆ ನೀಡಿದೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಣಾಳಿಕೆಗಳಲ್ಲಿ ರಾಮ ಮಂದಿರ ನಿರ್ಮಾಣ ಕೂಡಾ ಒಂದಾಗಿದೆ. 2012 ರಲ್ಲಿ ಹೊರತುಪಡಿಸಿ ಮಿಕ್ಕ ಅವಧಿಯಲ್ಲೆಲ್ಲಾ ಅಯೋಧ್ಯೆಯಲ್ಲಿ ಬಿಜೆಪಿ ಶಾಸಕರೇ ಆಯ್ಕೆಯಾಗಿದ್ದಾರೆ.
