ಬಹುಭಾಷಾ ನಟಿ ಕೃಷ್ಣ ಕುಮಾರಿ ಇನ್ನಿಲ್ಲ

First Published 24, Jan 2018, 11:02 AM IST
Veteran actress Krishna Kumari passes away
Highlights

ಬಹುಭಾಷಾ ಹಿರಿಯ ನಟಿ ಕೃಷ್ಣಕುಮಾರಿ  ಕನಕಪುರದ ಸ್ವಗೃಹದಲ್ಲಿಂದು ಬೆಳಿಗ್ಗೆ 6 ಗಂಟೆಗೆ  ವಿಧಿವಶರಾಗಿದ್ದಾರೆ. ನಾಳೆ ಕನಕಪುರದ ಕೃಷ್ಣಕುಮಾರಿ ಎಸ್ಟೇಟ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಬೆಂಗಳೂರು (ಜ.24): ಬಹುಭಾಷಾ ಹಿರಿಯ ನಟಿ ಕೃಷ್ಣಕುಮಾರಿ  ಕನಕಪುರದ ಸ್ವಗೃಹದಲ್ಲಿಂದು ಬೆಳಿಗ್ಗೆ 6 ಗಂಟೆಗೆ  ವಿಧಿವಶರಾಗಿದ್ದಾರೆ. ನಾಳೆ ಕನಕಪುರದ ಕೃಷ್ಣಕುಮಾರಿ ಎಸ್ಟೇಟ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಕೃಷ್ಣಕುಮಾರಿ, ಹಿರಿಯ ನಟಿ ಸಾಹುಕಾರ್ ಜಾನಕಿ ಸಹೋದರಿ.   ರಾಜ್‌ಕುಮಾರ್, ಎನ್.ಟಿ.ಆರ್. ನಾಗೇಶ್ವರ್ ರಾವ್ ಸೇರಿದಂತೆ ಸಾಕಷ್ಟು ನಟರೊಂದಿಗೆ ಅಭಿನಯಿಸಿದ್ದಾರೆ.

ಸುಮಾರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೃಷ್ಣಕುಮಾರಿ ಅಭಿನಯಿಸಿದ್ದಾರೆ.  60-80 ದಶಕದಲ್ಲಿ ದಕ್ಷಿಣ ಭಾರತದ  ಸ್ಟಾರ್ ನಟಿಯಾಗಿ ಕೃಷ್ಟಕುಮಾರಿ ಮಿಂಚಿದ್ದಾರೆ.  ಸುಮಾರು ವರ್ಷಗಳಿಂದ ಮಗಳೊಂದಿಗೆ ಬೆಂಗಳೂರಿನಲ್ಲಿ ನೆಲಸಿದ್ದರು.

1951 'ನವ್ವಿತೆ ನವರತ್ನುಲು' ತೆಲುಗು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಕೃಷ್ಣ ಕುಮಾರಿ  1954 ರಲ್ಲಿ ಜಲಧುರ್ಗ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.  ಭಕ್ತ ಕನಕದಾಸ, ಆಶಾ ಸುಂದರಿ, ಶ್ರೀಶೈಲಾ ಮಹಾತ್ಮೆ,  ಸ್ವರ್ಣಗೌರಿ ದಶಾವತಾರ, ಭಕ್ತ ಕಬೀರಾ,  ಚಂದ್ರಕುಮಾರ ಸೇರಿದಂತೆ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.

 

loader