Asianet Suvarna News Asianet Suvarna News

ನಮ್ಮ ಕೊಬ್ಬರಿ ಎಣ್ಣೆ ವಿಷ? ಅಮೆರಿಕದ್ದು ಇದೆಂಥಾ ಆರೋಪ

ತೆಂಗಿನ ಎಣ್ಣೆ ಎಂದ ತಕ್ಷಣ ನಮಗೆ ಕೇರಳ ನೆನಪಾಗುತ್ತದೆ. ಸದ್ಯ ಇಡೀ ಕೇರಳ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಹೋರಾಡುತ್ತಿದೆ. ಕೇರಳ ಮಾತ್ರವಲ್ಲ ನಮ್ಮ ಕರ್ನಾಟಕದ ಮಲೆನಾಡು ಭಾಗದಲ್ಲಿಯೂ ಕೊಬ್ಬರಿ ಎಣ್ಣೆಗೆ ಬಹಳ ಮುಖ್ಯ ಸ್ಥಾನ. ಅಡುಗೆಮನೆಯಲ್ಲಿ ರಾಜನ ಗೌರವ. ಇಂಥ  ತೆಂಗಿನ ಎಣ್ಣೆ ವಿಚಾರದಲ್ಲಿ ಹಾವರ್ಡ್ ವಿವಿಯ ಪ್ರೋಫೆಸರ್ ಮಂಡಿಸಿದ ಭಾಷಣವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತೆಂಗಿನ ಎಣ್ಣೆಗೂ -ಹಾವರ್ಡ್ ವಿವಿಗೂ ಎತ್ತಿಂದೆತ್ತಣ ಸಂಬಂಧ...?

VERIFY Is coconut oil really pure poison?
Author
Bengaluru, First Published Aug 23, 2018, 6:23 PM IST

ನವದೆಹಲಿ[ಆ.23] ಹಾವರ್ಡ್ ವಿವಿಯ ಕೈರನ್ ಮೈಕಲ್ ಸಂವಾದವೊಂದರಲ್ಲಿ ಮಾತನಾಡುತ್ತ ತೆಂಗಿನ ಎಣ್ಣೆ ‘ನಿಧಾನ ವಿಷ’ ಎಂದು ಹೇಳುತ್ತಾರೆ. ಇದನ್ನು ತಿನ್ನುವುದು ವಿಷ ತಿಂದಂತೆ ಎಂದು ಹೇಳುತ್ತಾರೆ. ತಮ್ಮ ಭಾಷಣದಲ್ಲಿ ತೆಂಗಿನ ಎಣ್ಣೆಗೆ ಮೂರು ಸಾರಿ ವಿಷದ ಪಟ್ಟ ಕಟ್ಟುತ್ತಾರೆ.

ಇನ್ನೊಂದು ಕಡೆ ಡಾ.ಬಿ.ಎಂ.ಹೆಗಡೆ ತೆಂಗಿನ ಎಣ್ಣೆ ಪ್ರಯೋಜನಗಳ ಬಗ್ಗೆ ಮಾಡಿದ್ದ ಭಾಷಣವೂ ಇದೆ. ತೆಂಗಿನ ಎಣ್ಣೆ ಕ್ರಿಮಿನಾಶಕ, ಜೀರ್ಣ ಕ್ರಿಯೆಗೆ ಅನುಕೂಲಕಾರಿ  ಎಂದು ಹಲವಾರು ಉಪಯೋಗಗಳನ್ನು ನಮ್ಮ ಮುಂದೆ ತೆರೆದಿರಿಸುತ್ತಾರೆ.

 

ಹಾವರ್ಡ್ ವಿವಿಯ ಕೈರನ್ ಮೈಕಲ್ ಮತ್ತು  ಡಾ.ಬಿ.ಎಂ.ಹೆಗಡೆ ಇಬ್ಬರ ಭಾಷಣದಲ್ಲಿಯೂ ತೆಂಗಿನ ಎಣ್ಣೆಯೇ  ಪ್ರಧಾನ ಅಂಶ. ಒಬ್ಬರೂ ಪರವಾಗಿದ್ದರೆ ಇನ್ನೊಬ್ಬರದ್ದು ವಿರೋಧ. ನಿಮ್ಮ ತಿಳಿವಳಿಕೆಗೆ ಮುಂದಿನ ವಿಚಾರವನ್ನೇ ಬಿಟ್ಟುಕೊಳ್ಳೋಣ.

ಮಲೆನಾಡ ಭಾಗದಿಂದ ಬಂದವರಿಗೆ ತೆಂಗಿನ ಎಣ್ಣೆ ಬಳಕೆ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಅಡುಗೆಗೆ ಬಳಸುವುದು ಮಾತ್ರವಲ್ಲದೇ, ತಲೆ ನೋವು ಬಂದರೆ, ಬಿದ್ದು ಗಾಯವಾದರೆ, ಕೈ ಸುಟ್ಟುಕೊಂಡರೂ ತೆಂಗಿನ ಎಣ್ಣೆ ಬಳಕೆ ಮಾಡುವುದೆನ್ನು ಕಣ್ಣಾರೆ ಕಂಡಿದ್ದೇವೆ. 

 

ಅಂತಿಮವಾಗಿ ಒಂದಿಷ್ಟು ಪ್ರಶ್ನೆಗಳು ನಮ್ಮನ್ನು ಕಾಡಲು ಆರಂಭಿಸುತ್ತವೆ. ಭಾರತದ ಸಾಂಪ್ರದಾಯಿಕ ಔಷಧಿಗಳ ಮೇಲೆ ನಿರಂತರವಾಗಿ ಪ್ರಹಾರ ಮಾಡುತ್ತಿರುವ  ಮಲ್ಟಿ ನ್ಯಾಶನಲ್ ಕಂಪನಿಗಳ ಹುನ್ನಾರ ಇದರ ಹಿಂದಿದೆಯೇ? ಹಿಂದೆ ನಮ್ಮ ಆರ್ಯುವೇದಕ್ಕೆ ಕೊಳ್ಳಿ ಇಟ್ಟ ಕೆಲ ಕಾಣದ ಕೈಗಳು ಅಡಗಿವೆಯೇ? ಗೊತ್ತಿಲ್ಲ.. ಎರಡು ಭಾಷಣ ಕೇಳಿ... ನಂತರ ನಿಮ್ಮ ಅಭಿಪ್ರಾಯ ದಾಖಲಿಸಲು ಮರೆಯಬೇಡಿ.

Follow Us:
Download App:
  • android
  • ios