ಗದಗದಲ್ಲಿ ವೀರಶೈವ ಲಿಂಗಾಯತ ಜನಜಾಗೃತಿ ಸಮಾವೇಶದಲ್ಲಿ  ಎಂಟು ಪ್ರಮುಖ ನಿರ್ಣಯಗಳನ್ನು  ಅಂಗೀಕಾರ ಮಾಡಲಾಗಿದೆ. ಪಂಚಪೀಠಾಧೀಶರು, ಗುರುವಿರಕ್ತರು, ವೀರಶೈವ ಲಿಂಗಾಯತ ಧರ್ಮೀಯರು  ಒಮ್ಮತದಿಂದ ಪ್ರಮುಖ ನಿರ್ಣಯಗಳ ಅಂಗೀಕಾರ ಮಾಡಿದ್ದಾರೆ. ವಿಭೂತಿಪುರ ಮಠದ ಶ್ರೀಗಳು ನಿರ್ಣಯಗಳನ್ನು ಓದಿದ್ದಾರೆ.

ಗದಗ (ಡಿ.24): ಗದಗದಲ್ಲಿ ವೀರಶೈವ ಲಿಂಗಾಯತ ಜನಜಾಗೃತಿ ಸಮಾವೇಶದಲ್ಲಿ ಎಂಟು ಪ್ರಮುಖ ನಿರ್ಣಯಗಳನ್ನು ಅಂಗೀಕಾರ ಮಾಡಲಾಗಿದೆ. ಪಂಚಪೀಠಾಧೀಶರು, ಗುರುವಿರಕ್ತರು, ವೀರಶೈವ ಲಿಂಗಾಯತ ಧರ್ಮೀಯರು ಒಮ್ಮತದಿಂದ ಪ್ರಮುಖ ನಿರ್ಣಯಗಳ ಅಂಗೀಕಾರ ಮಾಡಿದ್ದಾರೆ. ವಿಭೂತಿಪುರ ಮಠದ ಶ್ರೀಗಳು ನಿರ್ಣಯಗಳನ್ನು ಓದಿದ್ದಾರೆ.

1. ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ನಾಣ್ಯದ ಎರಡು ಮುಖಗಳು.

2. ಸಿದ್ಧಗಂಗಾ ಶ್ರೀಗಳ ಹೇಳಿಕೆಯನ್ನು ಬೆಂಬಲಿಸುವುದು.

3. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ರಚನೆಯಾಗಿರುವ ಸಮಿತಿಯನ್ನು ವಿಸರ್ಜಿಸುವಂತೆ ಅಲ್ಪಸಂಖ್ಯಾತರ ಆಯೋಗಕ್ಕೆ ಆಗ್ರಹಿಸುವುದು

4. ವೀರಶೈವ ಲಿಂಗಾಯತ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಪ್ರವರ್ಗ ಸೃಷ್ಟಿಸಿ ಶೇಕಡ 15 ರಷ್ಟು ಮೀಸಲಾತಿಗೆ ಆಗ್ರಹಿಸುವುದು.

5. ಕಳಸಾ- ಬಂಡೂರಿ, ಮಹದಾಯಿ ಯೋಜನೆಯನ್ನು ಶೀಘ್ರವೇ ಬಗೆಹರಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಆಗ್ರಹಿಸುವುದು.

6. ವೀರಶೈವ ಮತ್ತು ಲಿಂಗಾಯತರ ಸಮಗ್ರ ಅಭಿವೃದ್ಧಿಗೆ ವೀರಶೈವ ಮಹಾಸಭಾ ಕೈಗೊಳ್ಳುವ ನಿರ್ಣಯಕ್ಕೆ ಅನುಮೋದನೆ ನೀಡುವುದು

7. ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಒತ್ತಾಯಿಸೋರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹ 8. ವೀರಶೈವ ಮತ್ತು ಲಿಂಗಾಯಿತ ಒಂದೇ ಎಂದು ಪುನರುಚ್ಚಾರ