ಸಿಲಿಕಾನ್ ಸಿಟಿಯಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಕಳೆದ ತಿಂಗಳು ಸುರಿದ ಮಹಾ ಮಳೆ ಪರಿಣಾಮ ತರಕಾರಿ ಬೆಲೆ ಮೇಲೆ ಬೀರಿದ್ದು, ಬೆಲೆಯಲ್ಲಿ  ಭಾರಿ ಏರಿಕೆಯಾಗಿದೆ.  ಮಳೆಯಿಂದ ಬೆಳೆ ನಾಶವಾಗಿದ್ದು, ಇದೇ ಪರಿಸ್ಥಿತಿ ಒಂದು ತಿಂಗಳು ಮುಂದುವರಿಯಲಿದೆ. ಹಾಪ್ ಕಾಮ್ಸ್ ಗಳಲ್ಲಿಯೂ ಬೆಲೆ ಏರಿಕೆಯಾಗಿದೆ. ವ್ಯಾಪಾರವೂ ಕಡಿಮೆಯಾಗಿದೆ.

ಬೆಂಗಳೂರು (ನ.12): ಸಿಲಿಕಾನ್ ಸಿಟಿಯಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಕಳೆದ ತಿಂಗಳು ಸುರಿದ ಮಹಾ ಮಳೆ ಪರಿಣಾಮ ತರಕಾರಿ ಬೆಲೆ ಮೇಲೆ ಬೀರಿದ್ದು, ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಮಳೆಯಿಂದ ಬೆಳೆ ನಾಶವಾಗಿದ್ದು, ಇದೇ ಪರಿಸ್ಥಿತಿ ಒಂದು ತಿಂಗಳು ಮುಂದುವರಿಯಲಿದೆ. ಹಾಪ್ ಕಾಮ್ಸ್ ಗಳಲ್ಲಿಯೂ ಬೆಲೆ ಏರಿಕೆಯಾಗಿದೆ. ವ್ಯಾಪಾರವೂ ಕಡಿಮೆಯಾಗಿದೆ.

ತರಕಾರಿಗಳಾದ ಕ್ಯಾರೇಟ್, ಬೀನ್ಸ್, ಮೆಣಕಾಸಿ, ಹಗಲಕಾಯಿ, ಟೋಮ್ಯಾಟೋ ಬೆಲೆ ಪ್ರತಿ ಕೆಜಿಗೆ 80 ರೂಪಾಯಿ ಇದ್ದರೆ ಈರುಳ್ಳಿ, ಬೆಂಡೆಕಾಯಿ, ಹಿರೇಕಾಯಿ, ಅವರೆಕಾಯಿ ಬೆಲೆ 60 ರೂಪಾಯಿ ದಾಟಿದೆ. ಇನ್ನೂ ನವಲುಕೋಸು ಬೆಲೆ 120 ರೂಪಾಯಿಯಾಗಿದ್ದು ಜನ ಸಾಮಾನ್ಯರಿಗೆ ಕೈಗೆಟುಕದಂತಾಗಿದೆ. ಸಿಲಿಕಾನ್ ಸಿಟಿಯಲ್ಲಾದ ಮಳೆ ಕೇವಲ ರಸ್ತೆ, ಮನೆ ಕುಸಿತ, ಪ್ರಾಣ ಹಾನಿಗೆ ಸೀಮಿತವಾಗದೆ, ತರಕಾರಿ ಬೆಲೆ ಮೇಲೂ ಪರಿಣಾಮ ಬೀರಿದೆ. ವಾರದಲ್ಲಿ ಬೆಲೆ ಏರಿಕೆ ನಿಯಂತ್ರಣಕ್ಕೆ ಬರದಿದ್ದರೆ, ಸಿಲಿಕಾನ್ ಸಿಟಿ ಜನರ ಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.