ಅಹಮದಾಬಾದ್ [ಸೆ.11]: ಶಾಕಾಹಾರಿ ವ್ಯಕ್ತಿಯೊಬ್ಬರಿಗೆ ಸಸ್ಯಾಹಾರದ ಬದಲು ಮಾಂಸಾಹಾರ ಊಟ ನೀಡಿದ್ದಕ್ಕಾಗಿ ಜೆಟ್ ಏರ್ ಲೈನ್ ಸಂಸ್ಥೆಗೆ ರಾಜ್ ಕೋಟ್ ಜಿಲ್ಲಾ ಗ್ರಾಹಕರ ನ್ಯಾಯಾಲಯ 65 ಸಾವಿರ ರೂ. ದಂಡ ವಿಧಿಸಿದೆ.

ಭಾನುಪ್ರಸಾದ್ ಜಾನಿ ಎಂಬುವವರು  ಜೆಟ್ ಏರ್'ವೇಸ್ ವಿಮಾನದಲ್ಲಿ ಆಗಸ್ಟ್ 20, 2016 ರಂದು ಚೆನ್ನೈನಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಊಟದ ಸಮಯದಲ್ಲಿ ಭಾನುಪ್ರಸಾದ್ ಅವರು ಏಷ್ಯನ್ ಸಸ್ಯಾಹಾರವನ್ನು ಆರ್ಡ್'ರ್ ಮಾಡಿದ್ದರು. ಆದರೆ ಅವರಿಗೆ ಮಾಂಸಾಹಾರವನ್ನು ನೀಡಲಾಗಿತ್ತು. ಊಟ ಸೇವಿಸಿದ ನಂತರ  ಅಸ್ವಸ್ಥಗೊಂಡು ವಾಂತಿ ಮಾಡಿಕೊಂಡಿದ್ದರು. 

ಬ್ರಾಹ್ಮಣ ಸಮುದಾಯದ ತಾನು ಶುದ್ಧ ಶಾಕಾಹಾರಿಯಾಗಿದ್ದು ಇಲ್ಲಿಯವರೆಗೂ ಮಾಂಸಾಹಾರ ಸೇವಿಸಿಲ್ಲ. ಇದರಿಂದ ನಿತ್ಯ ತನ್ನ ಪತ್ನಿಯ ಜೊತೆ ಜಗಳವಾಗುತ್ತಿದೆ. ಆದ ಕಾರಣ  ತನಗೆ  7. 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಗ್ರಾಹಕರ ಕೋರ್ಟಿನಲ್ಲಿ ದಾವೆ ಹೂಡಿದ್ದರು. ಮನವಿ ಪರಿಗಣಿಸಿದ ಕೋರ್ಟ್  65 ಸಾವಿರ ಪರಿಹಾರವನ್ನು ಭಾನುಪ್ರಸಾದ್ ಅವರಿಗೆ ನೀಡಬೇಕೆಂದು ಆದೇಶಿಸಿದೆ.