ಸ್ಪೀಕರ್ ಕೊಠಡಿ ಮುಂದೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿದ ವಾಟಾಳ್, ಮಾಧ್ಯಮಗಳ ನಿಯಂತ್ರಣದಿಂದ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದಂತೆ, ಎಂದಿದ್ದಾರೆ
ಬೆಂಗಳೂರು (ಮಾ.30): ಮಾಧ್ಯಮಗಳ ನಿಯಂತ್ರಣಕ್ಕೆ ಸದನ ಸಮಿತಿ ರಚನೆ ವಿರೋಧಿಸಿ ವಿಧಾನಸೌಧದ ಸ್ಪೀಕರ್ ಕೊಠಡಿ ಮುಂದೆ ವಾಟಾಳ್ ನಾಗರಾಜ್ ಇಂದು ಪ್ರತಿಭಟನೆ ನಡೆಸಿದ್ದಾರೆ.
ಸ್ಪೀಕರ್ ಕೊಠಡಿ ಮುಂದೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿದ ವಾಟಾಳ್, ಮಾಧ್ಯಮಗಳ ನಿಯಂತ್ರಣದಿಂದ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದಂತೆ, ಸ್ಪೀಕರ್ ತಮ್ಮ ತೀರ್ಮಾನ ವಾಪಸ್ ಪಡೆಯಬೇಕು, ಎಂದು ಆಗ್ರಹಿಸಿದ್ದಾರೆ.
ಸಚಿವ ರಮೇಶ್ ಕುಮಾರ್ ಸದನ ಸಮಿತಿ ಅಧ್ಯಕ್ಷತೆ ಒಪ್ಪಿಕೊಳ್ಳಬಾರದು ಎಂದು ವಾಟಾಳ್ ಈ ಸಂದರ್ಭದಲ್ಲಿ ಆಗ್ರಹಿಸಿದರು.
