2018ಕ್ಕೆ ವಾಟಾಳ್ ಪಕ್ಷ ಚುನಾವಣೆಗೆ ಸಿದ್ದವಾಗಿದ್ದು, ನವೆಂಬರ್ 2ಕ್ಕೆ ಚುನಾವಣೆ ಪ್ರಚಾರ ಆರಂಭಿಸುತ್ತಿದೆಯಂತೆ
ಬೆಂಗಳೂರು(ಸೆ.26):ವಾಟಾಳ್ ನಾಗರಾಜ್ ತಮ್ಮ ಹುಟ್ಟು ಹಬ್ಬವನ್ನಾ ಬೂಟ್ಸ್ ಏಟು ಬಿದ್ದ ಅಪೂರ್ವ ಜನ್ಮದಿನವೆಂದು ಆಚರಿಸಿಕೊಂಡಿದ್ದಾರೆ.
1962 ರಲ್ಲಿ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರ ಪ್ರದರ್ಶಿಸುವಂತೆ ಮಾಡಿದ ಹೋರಾಟದಲ್ಲಿ ಪೊಲೀಸರಿಂದ ತಿಂದ ಬೂಟ್ಸ್ ಏಟಿನ ನೆನಪಿಗಾಗಿಯೇ ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 2018ಕ್ಕೆ ವಾಟಾಳ್ ಪಕ್ಷ ಚುನಾವಣೆಗೆ ಸಿದ್ದವಾಗಿದ್ದು, ನವೆಂಬರ್ 2ಕ್ಕೆ ಚುನಾವಣೆ ಪ್ರಚಾರ ಆರಂಭಿಸುತ್ತಿದೆಯಂತೆ. 'ನಮ್ಮ ಪಕ್ಷದಿಂದ 100 ಅಭ್ಯರ್ಥಿಗಳನ್ನು ರಾಜ್ಯದ ಜನತೆ ಗೆಲ್ಲಿಸಬೇಕು.ಗೆದ್ದರೆ ರಾಜ್ಯದ ಪರ ದುಡಿತೀವಿ.ಇಲ್ಲದಿದ್ರೆ ಮನೆಯಲ್ಲಿ ಕಸ ಗುಡಿಸಿಕೊಂಡು ಇರ್ತೇವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
