ನವದೆಹಲಿ(ಅ.20): ಶಸ್ತ್ರಾಸ್ತ್ರ ದಲ್ಲಾಳಿ ಆಭಿಷೇಕ್ ವರ್ಮ ಹಾಕಿದ ಬಲೆಯಲ್ಲಿ ಬಿಜೆಪಿ ಸಂಸದ ವರುಣ್ ಗಾಂಧಿ ಸಿಲುಕಿಕೊಂಡಿದ್ದಾರೆ. ವರುಣ್ ಗಾಂಧಿ ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದು, ರಾಷ್ಟ್ರೀಯ ಭದ್ರತಾ ಮಾಹಿತಿಯನ್ನ ಸೋರಿಕೆ ಮಾಡಿದ್ದಾರೆ ಅಂತಾ ಪ್ರಧಾನಿ ಕಾರ್ಯಾಲಯಕ್ಕೆ ಮಾಹಿತಿಯನ್ನ ನೀಡಲಾಗಿದೆ.

ಅಮೆರಿಕದ ಮಾಹಿತಿ ಹಕ್ಕು ಕಾರ್ಯಕರ್ತನಾದ ಎಡ್ಮಂಡ್ ಅಲೆನ್, ವರುಣ್ ಗಾಂಧಿ  ಹನಿಟ್ರ್ಯಾಪ್ ಬಲೆಗೆ ಬಿದ್ದಿರುವುದಕ್ಕೆ ಸಾಕ್ಷ್ಯಗಳನ್ನು ರಕ್ಷಣಾ ಸಚಿವ ಮನೋಹರ್ ಪರೀಕ್ಕರ್, ರಾಷ್ಟ್ರೀಯ  ಭದ್ರತ  ಸಲಹೆಹಾರ ಅಜಿತ್ ಧೂವಲ್  ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಪತ್ರದ ಮೂಲಕ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ತಮ್ಮ ಪತ್ರದಲ್ಲಿ ಮಾಹಿತಿಗೆ ಪೂರಕವಾದ ಆಧಾರಗಳಾದ ಸಿಡಿ ಮತ್ತು ಫೋಟೋಗಳನ್ನು ಸಹ  ರವಾನಿಸಿದ್ದಾರೆ.