ನಾಡಿನಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮನೆಯಲ್ಲಿ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಪೂಜಿಸಲು ಮಹಿಳೆ ಕಾತುರರಾಗಿದ್ದು, ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿದೆ. ಹಬ್ಬ ಅಂದ್ರೆ ಕೇಳಬೇಕು ಮಾರುಕಟ್ಟೆಯಲ್ಲಿ ಹೂ-ಹಣ್ಣುಗಳ ದರ ಗಗನಕ್ಕೇರಿರುತ್ತೆ.

ಬೆಂಗಳೂರು(ಆ.04): ನಾಡಿನಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮನೆಯಲ್ಲಿ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಪೂಜಿಸಲು ಮಹಿಳೆ ಕಾತುರರಾಗಿದ್ದು, ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿದೆ. ಹಬ್ಬ ಅಂದ್ರೆ ಕೇಳಬೇಕು ಮಾರುಕಟ್ಟೆಯಲ್ಲಿ ಹೂ-ಹಣ್ಣುಗಳ ದರ ಗಗನಕ್ಕೇರಿರುತ್ತೆ.

ಕಳೆದ ವಾರಕ್ಕೆ ಹೋಲಿಸಿದರೆ, ಈ ವಾರ ಹೂ - ಹಣ್ಣುಗಳ ದರ ದುಪ್ಪಟ್ಟಾಗಿದೆ. ಒಂದೊಂದು ಮಾರುಕಟ್ಟೆಯಲ್ಲಿ ಒಂದೊಂದು ಬೆಲೆಯಿದೆ. ಹಾಗಾದ್ರೆ ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳಲ್ಲಿ ಯಾವ ಯಾವ ರೀತಿ ದರ ಎಂಬುದನ್ನು ನೋಡುವುದಾದರೆ.

ಕೆ ಆರ್ ಮಾರ್ಕೆಟಲ್ಲಿ ಕೆಜಿ ಕನಕಾಂಬರಕ್ಕೆ 1600ರೂ ಇದ್ದರೆ, ಮಲ್ಲೆಶ್ವರಂ ಮಾರ್ಕೆಟಲ್ಲಿ ಕೆಜಿ ಕನಕಾಂಬರಕ್ಕೆ ಬರೋಬ್ಬರಿ 2000ರೂ ಇದೆ. ಕಾಕಡ ಮಲ್ಲಿಗೆಗೆ ಕೆ ಆರ್ ಮಾರ್ಕೆಟಲ್ಲಿ ಕೆಜಿಗೆ 400 ರೂಪಾಯಿ ಇದ್ರೆ, ಮಲ್ಲೆಶ್ವರಂ ಮಾರ್ಕೆಟಲ್ಲಿ 600 ರೂಪಾಯಿ ಆಗಿದೆ. ಗುಲಾಬಿ ಕೆಜಿಗೆ ಕೆ ಆರ್ ಮಾರ್ಕೆಟಲ್ಲಿ 240 ರೂ ಇದ್ರೆ, ಮಲ್ಲೆಶ್ವರಂ ಮಾರ್ಕೆಟಲ್ಲಿ 300 ರೂ ಆಗಿದೆ. ಮಲ್ಲಿಗೆ ಕೆಜಿಗೆ ಕೆ ಆರ್ ಮಾರ್ಕೆಟಲ್ಲಿ 800 ರು ಇದ್ರೆ, ಮಲ್ಲೇಶ್ವರಂ ಮಾರ್ಕೆಟಲ್ಲಿ ಬರೋಬ್ಬರಿ 1000 ಇದೆ. ಸುಗಂಧರಾಜ ಕೆಜಿಗೆ ಕೆ.ಆರ್ ಮಾರ್ಕೆಟಲ್ಲಿ 160 ಆದರೆ ಮಲ್ಲೇಶ್ವರಂ ಮಾರ್ಕೆಟಲ್ಲಿ 400 ರೂ ಇದೆ. ಇನ್ನು ಲಕ್ಷ್ಮಿಗೆ ಪ್ರಿಯವಾದ ತಾವರೆ ಜೋಡಿಗೆ ಕೆ.ಆರ್ ಮಾರ್ಕೆಟಲ್ಲಿ 100 ರೂಪಾಯಿ ಇದ್ರೆ, ಮಲ್ಲೇಶ್ವರಂನಲ್ಲಿ 160 ರೂಪಾಯಿ ಇದೆ.

ಗಗನಕ್ಕೇರಿದಹಣ್ಣಿನದರ

ಇನ್ನು ಲಕ್ಷ್ಮಿ ಪೂಜೆಗೆ ಹಣ್ಣುಗಳು ಇರಲೇಬೇಕು. ಲಕ್ಷ್ಮಿಗೆ ಪ್ರಿಯವಾದ ಸೇಬು ಕೆಜಿಗೆ 160 ರೂ. ಇದ್ದರೆ. ದಾಳಿಂಬೆ 140 ರೂ ಇದೆ. ಬಾಳೆ ಹಣ್ಣು ಕೆಜಿ 100 ರೂಪಾಯಿ ಆಗಿದೆ. ಹೀಗೆ ವರ್ಷದಿಂದ ವರ್ಷಕ್ಕೆ ಹೂವು -ಹಣ್ಣುಗಳ ದರ ಗಗನಕ್ಕೇರುತ್ತಿದ್ದು, ಗ್ರಾಹಕರು ವಿಧಿ ಇಲ್ಲದೆ ಖರೀದಿಸಬೇಕಿದೆ.

ಒಟ್ಟಾರೆ ಈ ಬಾರಿ ವರಮಹಾಲಕ್ಷ್ಮಿ ಪೂಜೆ ಎಲ್ಲರಿಗೂ ಸಂತಸ ತರಲಿ. ನಮ್ಮ ಕಡೆಯಿಂದಲೂ ನಾಡಿನ ಸಮಸ್ತೆ ಜನತೆಗೆ ವರಮಹಾಲಕ್ಷ್ಮಿ ಹಬ್ವದ ಶುಭಾಶಯಗಳು.