Asianet Suvarna News Asianet Suvarna News

ಯೋಗಿ ಸಂಪತ್ತಿನಲ್ಲಿ ಶೇ.32ರಷ್ಟು ಹೆಚ್ಚಳ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಪತ್ತು ಕಳೆದ 3 ವರ್ಷಗಳಲ್ಲಿ  ಶೇ. 32ರಷ್ಟು ಹೆಚ್ಚಳವಾಗಿದೆ. ಉತ್ತರ ಪ್ರದೇಶ ವಿಧಾನ ಪರಿಷತ್ತು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಯೋಗಿ ಆದಿತ್ಯನಾಥ್, ರಿಟರ್ನಿಂಗ್ ಆಫಿಸರ್’ಗೆ ಸಲ್ಲಿಸಿರುವ ಅಫಿಡಾವಿಟ್’ನಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

Value of Adityanath assets increased by 32 pc in 3 years

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಪತ್ತು ಕಳೆದ 3 ವರ್ಷಗಳಲ್ಲಿ  ಶೇ. 32ರಷ್ಟು ಹೆಚ್ಚಳವಾಗಿದೆ.

ಉತ್ತರ ಪ್ರದೇಶ ವಿಧಾನ ಪರಿಷತ್ತು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಯೋಗಿ ಆದಿತ್ಯನಾಥ್, ರಿಟರ್ನಿಂಗ್ ಆಫಿಸರ್’ಗೆ ಸಲ್ಲಿಸಿರುವ ಅಫಿಡಾವಿಟ್’ನಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಕಳೆದ ಲೋಕಸಭೆ ಚುನಾವಣೆ (2014)ಯ ಸಂದರ್ಭದಲ್ಲಿ ಯೋಗಿ ಆಸ್ತಿಯ ಒಟ್ಟು ಮೌಲ್ಯ ₹ 72,17,674.14 ಆಗಿತ್ತು. ಈಗ ಸಲ್ಲಿಸಿರುವ ಅಫಿಡಾವಿಟ್ ಪ್ರಕಾರ ಅವರ ಸಂಪತ್ತಿನ ಮೌಲ್ಯದಲ್ಲಿ ₹23.80 ಲಕ್ಷ ಹೆಚ್ಚಳವಾಗಿದ್ದು, ₹95,98,053.41 ಆಗಿದೆ.

ಅದರಲ್ಲಿ ಚಿನ್ನದ ಕಿವಿಯೋಲೆಗಳು, ಸರ ಹಾಗೂ ಮತ್ತಿತರ ಒಡವೆಗಳು ಸೇರಿವೆ. ಜತೆಗೆ, ₹ 1 ಲಕ್ಷದ ರಿವಾಲ್ವರ್ ಹಾಗೂ ₹ 80 ಸಾವಿರ ಮೌಲ್ಯದ ರೈಫಲ್ ಕೂಡಾ ಯೋಗಿ ಹೊಂದಿದ್ದಾರೆ.

ಗೋರಖ್’ಪುರದಿಂದ 5 ಬಾರಿ ಸಂಸದರಾಗಿರುವ ಯೋಗಿ, ಸಂಸದನಾಗಿ ಬರುವ ಸಂಬಳ ಮಾತ್ರ ಆದಾಯದ ಮೂಲವಾಗಿದೆ ಎಂದು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios