ಬೆಂಗಳೂರು[ಆ.16]: ಅಜಾತ ಶತ್ರು, ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನರಾದ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರದಿಂದ ನಾಳೆ ರಾಜ್ಯದ ಎಲ್ಲ ಶಾಲಾ ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.  

ಸರ್ಕಾರದ ವತಿಯಿಂದ 7 ದಿನಗಳ ಕಾಲ ಶೋಕಾಚರಣೆ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರವು ಸಹ ಸರ್ಕಾರಿ ಅಂಗಸಂಸ್ಥೆಗಳಿಗೆ ಅರ್ಧ ದಿನ ರಜೆ ಘೋಷಿಸಿದೆ.ಈಗಾಗಲೇ  ಉತ್ತರ ಪ್ರದೇಶ, ಉತ್ತರಖಂಡ್, ಮಧ್ಯ ಪ್ರದೇಶ, ಜಾರ್ಖಂಡ್ ಹಾಗೂ ದೆಹಲಿಯಲ್ಲಿ ಆಯಾ ರಾಜ್ಯ ಸರ್ಕಾರಗಳು ರಜೆ ಘೋಷಿಸಿವೆ.

ಬಿಜೆಪಿ ಅಧಿಕಾರವುಳ್ಳ ರಾಜ್ಯಗಳಲ್ಲಿ ರಜೆ ನೀಡುವ ಸಾಧ್ಯತೆಯಿದೆ. ನವದೆಹಲಿ ನಾಳೆ ಸ್ತಬ್ಧವಾಗಲಿದ್ದು ರಾಷ್ಟ್ರದ ಎಲ್ಲ ಪ್ರುಮುಖ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ  ಹಾರಿಸಲಾಗುತ್ತದೆ. ನಾಳೆ ಬೆಳಗ್ಗೆ 10 ಗಂಟೆಗೆ ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವಾಜಪೇಯಿ ಅವರ ಪಾರ್ಥಿವ ಶರೀರವನ್ನು ಇಡಲಾಗುವುದು. ದೇಶದ ಮೂಲೆ ಮೂಲೆಗಳಿಂದ 50 ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಸೇರುವ ಸಾಧ್ಯತೆಯಿದೆ.

ಈ ಸುದ್ದಿಯನ್ನು ಓದಿ: ಅಜಾತಶತ್ರು ಅಸ್ತಂಗತ