ಅಟಲ್ ಬಿಹಾರಿ ವಾಜಪೇಯಿ ಅಂದ ತಕ್ಷಣ ಅದರ ಜತೆಗೆ ಎಲ್ ಕೆ. ಅಡ್ವಾಣಿ ಎಂಬ ಹೆಸರು ಕೇಳಿ ಬರುತ್ತದೆ. ಬಿಜೆಪಿ ಮಟ್ಟಿಗೆ ಇಬ್ಬರು ರಾಮ-ಲಕ್ಷ್ಮಣರು. ಇವರ ಸ್ನೇಹಕ್ಕೆ 5  ದಶಕದ ಇತಿಹಾಸವೇ ಇದೆ. ಅದರಲ್ಲಿ ಒಂದು ಕೊಂಡಿ ಈಗ ಕಳಚಿಕೊಂಡಿದೆ.

ವಾಜಪೇಯಿಯವರ ಬಲಗೈ ಯಾರು ಎಂದು ವಿರೋಧಿಗಳನ್ನು ಕೇಳಿದರೂ ಬರು ಉತ್ತರ ಎಲ್.ಕೆ.ಅಡ್ವಾಣಿ. 1950ರಿಂದಲೇ ಇಬ್ಬರ ನಡುವೆ ಸ್ನೇಹ ಚಿಗುರೊಡೆದು ಅದು ಇಂದಿನವರೆಗೂ ಹಾಗೆ ಇತ್ತು. ಮುಂದೆಯೂ ಇರಲಿದೆ. ಇಬ್ಬರು ತುರ್ತು ಪರಿಸ್ಥಿತಿ ವಿರುದ್ಧ ಒಟ್ಟಾಗಿಯೇ ಹೋರಾಡಿದ್ದರು. ಇದಾದ ಮೇಲೆ ಅವರ ನಡುವಿನ ಸ್ನೇಹ ಮತ್ತಷ್ಟು ಗಟ್ಟಿಯಾಗಿತ್ತು.

ಬಣ್ಣದೋಕುಳಿಯಾಡಿ ಮೋದಿಯೊಂದಿಗೆ ನರ್ತಿಸಿದ್ದ ವಾಜಪೇಯಿ

ಯಾವುದಾದರೊಂದು ಸಮಸ್ಯೆ ಎದುರಾದಾಗ, ಅಥವಾ ಅಂಥ ಸಣದರ್ಭ ಬಂದಾಗ ಅಧಿಕಾರಿಗಳನ್ನು ವಾಜಪೇಯಿ ಕೇಳುತ್ತಿದ್ದುದು ‘ಅಡ್ವಾಣಿ ಅವರೊಂದಿಗೆ ಒಂದು ಸಾರಿ ಮಾತನಾಡಿ’ ಎಂದು. ಹೀಗೆ ಕೇಳುತ್ತಿದ್ಗದರು ಎಂದು ಸ್ವತಃ ಅಡ್ವಾಣಿ ಅವರೇ ಒಂದು ಸಂದರ್ಶನದಲ್ಲಿ ಹೇಳಿದ್ದರು.

ವಾಜಪೇಯಿ ಬಗ್ಗೆ ಗೊತ್ತಿರದ 10 ಸಂಗತಿಗಳು

ಅಡ್ವಾಣಿ ಮತ್ತು ವಾಜಪೇಯಿ ತಮ್ಮ ಆರಂಭದ ಹೋರಾಟದ ದಿನಗಳಲ್ಲಿ ಜತೆಯಾಗಿಯೇ ಓಡಾಡುತ್ತಿದ್ದರು. ಅಡ್ವಾಣಿ ಒಂದು ಸ್ಕೂಟರ್ ನಲ್ಲಿ ತೆರಳಿದರೆ, ವಾಜಪೇಯಿ ಮೋಟಾರ್ ಬೈಕ್ ಬಳಸುತ್ತಿದ್ದರು. ಸಿನಿಮಾಕ್ಕೂ ಟ್ಟಿಗೆ ತೆರಳುತ್ತಿದ್ದ ಜೋಡಿ ಗೋಲ್ ಗಪ್ಪಾ ತಿಂದು ಸಂತಸ ಪಡುತ್ತಿತ್ತು. ವಾಜಪೇಯಿ ಅವರಿಗೆ ಗೋಲ್ ಗಪ್ಪಾ ಅತಿ ಇಷ್ಟ ಎಂದು ಅಡ್ವಾಣಿ ಹಿಂದೊಮ್ಮೆ ನೆನಪು ಮಾಡಿಕೊಂಡಿದ್ದರು. ಇನ್ನು ವಾಜಪೇಯಿಯವರಿಗೆ ಭಾರತ ರತ್ನ ಗೌರವ ದೊರೆತಾಗ ಪ್ರತಿಕ್ರಿಯೆ ನೀಡಿದ್ದ ಅಡ್ವಾಣಿ ಕಣ್ಣೀರಾಗಿದ್ದರು.