ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್‌ ವಾದ್ರಾ ಭೂಹಗರಣ ಉರುಳಾಗೋ ಸಾಧ್ಯತೆ ಹೆಚ್ಚಾಗಿದೆ.

ಯಾಕೆಂದರೆ ಹರ್ಯಾಣದಲ್ಲಿ ಭೂಹಗರಣ ಕುರಿತು ಕುರಿತು ತನಿಖೆ ನಡೆಸಿದ ನ್ಯಾ. ಎಸ್‌.ಎನ್‌. ಧಿಂಗ್ರಾ ಅವರ ಏಕಸದಸ್ಯ ತನಿಖಾ ಆಯೋಗ ಇಂದು ಹರ್ಯಾಣ ಸರ್ಕಾರಕ್ಕೆ 182 ಪುಟಗಳ ವರದಿಯನ್ನು ಸಲ್ಲಿಸಿದೆ.

ವರದಿಯಲ್ಲಿನ ಅಂಶಗಳನ್ನು ಬಹಿರಂಗಪಡಿಸಲು ನಿರಾಕರಿಸಿರುವ ಸರ್ಕಾರ ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. ವಾದ್ರಾ ಕಂಪನಿಗೆ ಭೂಮಿ ನೀಡುವಲ್ಲಿ ಮಾಜಿ ಸಿಎಂ ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾನೂನುನನ್ನು ಉಲ್ಲಂಘಿಸಿರುವುದಾಗಿ ಧಿಂಗ್ರಾ ಆಯೋಗ ಪತ್ತೆ ಹಚ್ಚಿರುವುದಾಗಿ ಮೂಲಗಳು ತಿಳಿಸಿವೆ.

ಕಾನೂನನ್ನು ಗಾಳಿಗೆ ತೂರಿರುವ ಹೂಡಾ ಅವರು ರಾಬರ್ಟ್ ವಾದ್ರಾಗೆ ಭೂಮಿಯನ್ನು ನೀಡಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಭೂಪಿಂದರ್ ಸಿಂಗ್ ಹೂಡಾ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ತನಿಖೆ ನಡೆಸಲು ಬಿಜೆಪಿ ನೇತೃತ್ವದ ಖಟ್ಟರ್ ಸರ್ಕಾರ ಏಕಸದಸ್ಯ ತನಿಖಾ ಆಯೋಗವನ್ನು ರಚಿಸಿತ್ತು.