ದೇಶದಲ್ಲಿ ಸಂಭವಿಸಿದ ಒಟ್ಟಾರೆ ಕೊಲೆಗಳ ಪೈಕಿ ಉತ್ತರ ಪ್ರದೇಶದಲ್ಲೇ ಶೇ.16.1 ಹತ್ಯೆಗಳು ನಡೆದಿವೆ. 2581 ಕೊಲೆಗಳೊಂದಿಗೆ ಬಿಹಾರ ಎರಡನೇ ಸ್ಥಾನದಲ್ಲಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲೂ ಉತ್ತರಪ್ರದೇಶ ದೇಶದಲ್ಲೇ ಮುಂದಿದೆ.
ನವದೆಹಲಿ(ಡಿ.1): ಕೊಲೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆಯಲ್ಲಿ ದೇಶದ ಅತಿದೊಡ್ಡ ರಾಜ್ಯ, ಉತ್ತರಪ್ರದೇಶ ದೇಶದಲ್ಲೇ ಮೊದಲ ಸ್ಥಾನ ಪಡೆದು ಕೊಂಡಿದೆ ಎಂದು ಕೇಂದ್ರ ಸರ್ಕಾರದ ರಾಷ್ಟ್ರೀಯ ಅಪರಾಧ ದಾಖಲೆಗಳ ದಳ (ಎನ್‌ಸಿಆರ್‌ಬಿ) ತಿಳಿಸಿದೆ. 2016ನೇ ಸಾಲಿನಲ್ಲಿ ನಡೆದ ಅಪರಾಧಗಳ ಕುರಿತ ವರದಿಯನ್ನು ಅಪರಾಧಗಳ ದಾಖಲೆಗಳ ದಳ ಗುರುವಾರ ಬಿಡುಗಡೆ ಮಾಡಿದ್ದು, 4889 ಕೊಲೆ ಪ್ರಕರಣಗಳೊಂದಿಗೆ ಉತ್ತರ ಪ್ರದೇಶ ನಂ.1 ಸ್ಥಾನ ಪಡೆದಿದೆ.
ದೇಶದಲ್ಲಿ ಸಂಭವಿಸಿದ ಒಟ್ಟಾರೆ ಕೊಲೆಗಳ ಪೈಕಿ ಉತ್ತರ ಪ್ರದೇಶದಲ್ಲೇ ಶೇ.16.1 ಹತ್ಯೆಗಳು ನಡೆದಿವೆ. 2581 ಕೊಲೆಗಳೊಂದಿಗೆ ಬಿಹಾರ ಎರಡನೇ ಸ್ಥಾನದಲ್ಲಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲೂ ಉತ್ತರಪ್ರದೇಶ ದೇಶದಲ್ಲೇ ಮುಂದಿದೆ. ಆ ರಾಜ್ಯದಲ್ಲಿ ಕಳೆದ ವರ್ಷ 49262 ಪ್ರಕರಣಗಳು ದಾಖಲಾಗಿವೆ.
ದೇಶದಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆಯಲ್ಲಿ ಇದು ಶೇ.14.5ರಷ್ಟಿದೆ. 32513 ಪ್ರಕರಣಗಳೊಂದಿಗೆ (ಒಟ್ಟು ಪ್ರಕರಣಗಳಲ್ಲಿ ಶೇ.9.6) ಪಶ್ಚಿಮ ಬಂಗಾಳ ಎರಡನೇ ಸ್ಥಾನದಲ್ಲಿದೆ. 2016ರಲ್ಲಿ ದೇಶಾದ್ಯಂತ 38947 ಅತ್ಯಾಚಾರಗಳು ನಡೆದಿದ್ದು, 2015ನೇ ಸಾಲಿನ 34651ಕ್ಕೆ ಹೋಲಿಸಿದರೆ ಶೇ.12.4 ರಷ್ಟು ಏರಿಕೆಯಾಗಿದೆ. ರೇಪ್‌ಗಳಲ್ಲಿ ಮಧ್ಯಪ್ರದೇಶದ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದು, 4882 ಪ್ರಕರಣ ದಾಖಲಾಗಿವೆ.
