2014ರಲ್ಲಿ ಬಿಡುಗಡೆಯಾದ "ಯಾನ" ಬಳಿಕ "ಉತ್ತರಕಾಂಡ"ವು ಎಸ್.ಎಲ್.ಭೈರಪ್ಪನವರ ಹೊಚ್ಚ ಹೊಸ ಕಾದಂಬರಿಯಾಗಿದೆ.

ಬೆಂಗಳೂರು(ಜ. 10): ಕನ್ನಡದ ಅತ್ಯಂತ ಜನಪ್ರಿಯ ಕಾದಂಬರಿಕಾರ ಹಾಗೂ ಸರಸ್ವತಿ ಸಮ್ಮಾನ್ ಪುರಸ್ಕೃತ ಲೇಖಕ ಎಸ್.ಎಲ್.ಭೈರಪ್ಪನವರ ಹೊಸ ಕಾದಂಬರಿ ಬಿಡುಗಡೆಗೆ ಕ್ಷಣಗಣನೆ ನಡೆಯುತ್ತಿದೆ. "ಉತ್ತರಕಾಂಡ" ಕಾದಂಬರಿ ಶೀಘ್ರದಲ್ಲೇ ಬಿಡಗಡೆಯಾಗುವ ನಿರೀಕ್ಷೆ ಇದೆ. 2014ರಲ್ಲಿ ಬಿಡುಗಡೆಯಾದ "ಯಾನ" ಬಳಿಕ "ಉತ್ತರಕಾಂಡ"ವು ಎಸ್.ಎಲ್.ಭೈರಪ್ಪನವರ ಹೊಚ್ಚ ಹೊಸ ಕಾದಂಬರಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಾಸನ ಜಿಲ್ಲೆಯವರಾದ ಎಸ್.ಎಲ್.ಭೈರಪ್ಪನವರ ಕಾದಂಬರಿಗಳು ಕನ್ನಡದ ಓದುಗರ ಫೇವರಿಟ್ ಎನಿಸಿವೆ. ಉತ್ತರಕಾಂಡವೂ ಸೇರಿ ಭೈರಪ್ಪನವರು ಇಲ್ಲಿಯವರೆಗೆ 24 ಕಾದಂಬರಿಗಳನ್ನು ಬರೆದಿದ್ದಾರೆ. ಅನೇಕ ಕಾದಂಬರಿಗಳು ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಂಡಿವೆ. ಕೆಲ ಕಾದಂಬರಿಗಳು ಸಿನಿಮಾ ಕೂಡ ಆಗಿವೆ.