ಅಪಕ್ಕಾತಕ್ಕೀಡಾಗಿ ರಕ್ತದ ಮಡುವಿನಲ್ಲಿ ಬಿದ್ದವರನ್ನು 'ಕಾರು ರಕ್ತವಾಗುತ್ತದೆ' ಎಂದು ಆಸ್ಪತ್ರೆಗೆ ಕರೆದೊಯ್ಯಲು ಪೊಲೀಸರು ನಿರಾಕರಿಸಿದ್ದರಿಂದ, ಇಬ್ಬರು ಯುವಕರು ಅಸುನೀಗಿದ್ದಾರೆ.
ಶಹರ್‌ಪುರ್: ಅಪಕ್ಕಾತಕ್ಕೀಡಾಗಿ ರಕ್ತದ ಮಡುವಿನಲ್ಲಿ ಬಿದ್ದವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪೊಲೀಸರು ನಿರಾಕರಿಸಿದ್ದರಿಂದ, ಇಬ್ಬರು ಯುವಕರು ಅಸುನೀಗಿದ್ದಾರೆ. ಪೊಲೀಸರ ಈ ಅಮಾನವೀಯ ವರ್ತನೆಗೆ ಅತೀವ ವಿರೋಧ ವ್ಯಕ್ತವಾಗಿದ್ದು, ಉತ್ತರ ಪ್ರದೇಶದ ಶಹರನ್‌ಪುರ ಪೊಲೀಸರು ಇವರನ್ನು ಅಮಾನತುಗೊಳಿಸಿದ್ದಾರೆ.
ರಕ್ತದ ಮಡುವಿನಲ್ಲಿದ್ದ ಯುವಕರನ್ನು ಗಸ್ತಿನಲ್ಲಿದ್ದ ಪೊಲೀಸರು ನೋಡಿದ್ದಾರೆ. ಆದರೆ, ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೆ ಕಾರು ರಕ್ತವಾಗುತ್ತದೆ ಎಂಬ ನೆಪವೊಡ್ಡಿ, ಆಸ್ಪತ್ರೆಗೆ ಸಾಗಿಸಲು ನಿರಾಕರಿಸಿದ್ದ ವೀಡಿಯೋವನ್ನು ಖಾಸಗಿ ಇಂಗ್ಲಿಷ್ ಸುದ್ದಿ ವಾಹಿನಿಯೊಂದು ಪ್ರಸಾರ ಮಾಡುತ್ತಿತ್ತು.
ತನಿಖೆ ನಂತರ ಈ ಪೊಲೀಸರು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಶಹರನ್‌ಪುನ್ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ. ಪೊಲೀಸರು ವೈದ್ಯಕೀಯ ನೆರವು ನೀಡುವುದನ್ನು ನಿರಾಕರಿಸಿದ ವೀಡಿಯೋ ವೈರಲ್ ಆಗಿದ್ದು, ಈ ಆರೋಪ ಸತ್ಯವೆನಿಸುತ್ತದೆ, ಎಂದವರು ಹೇಳಿದ್ದಾರೆ.
'ಯಾರದ್ದೋ ಮಕ್ಕಳಿವರು. ಇವರನ್ನು ಆಸ್ಪತ್ರೆಗೆ ಸೇರಿಸೋಣ..' ಎಂದು ವ್ಯಕ್ತಿಯೊಬ್ಬರು ಪೊಲೀಸರಿಗೆ ಮನವಿ ಮಾಡಿಕೊಳ್ಳುತ್ತಿದ್ದಾಗ, 'ಕಾರು ರಕ್ತವಾಗುತ್ತದೆ. ಅದನ್ನು ತೊಳೆದರೆ ರಾತ್ರಿಯೆಲ್ಲಾ ನಾವು ಕೂರೋದು ಎಲ್ಲಿ?'ಎಂದು ಪೊಲೀಸರು ಪ್ರಶ್ನಿಸಿದ ದೃಶ್ಯ ವೈರಲ್ ಆಗಿತ್ತು.
