ಕರ್ತವ್ಯನಿರತ ಪೊಲೀಸರು ಜೀಪಿನಲ್ಲೇ ಬಿಯರ್ ಪಾರ್ಟಿಯಲ್ಲಿ ತೊಡಗಿರುವ ದೃಶ್ಯಗಳು ಇದೀಗ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿವೆ. ಇದನ್ನು ಕಂಡ ಸ್ಥಳೀಯನೊಬ್ಬ 'ನೀವು ಪೊಲೀಸರು ಕರ್ತವ್ಯದಲ್ಲಿರುವಾಗ ಜೀಪಿನಲ್ಲಿ ಕುಳಿತು ಬಿಯರ್ ಪಾರ್ಟಿ ಮಾಡುತ್ತಿದ್ದೀರಾ?' ಎಂದು ಪ್ರಶ್ನಿಸಿದಾಗ ಈ ದೃಶ್ಯಗಳನ್ನು ಮೊಬೈಲ್'ನಲ್ಲಿ ಚಿತ್ರೀಕರಿಸಲು ಮುಂದಾದಾಗ ತಬ್ಬಿಬ್ಬಾಗಿದ್ದಾಗಿದ್ದಾರೆ.

ಉತ್ತರ ಪ್ರದೇಶ(ಎ.01): ಕರ್ತವ್ಯನಿರತ ಪೊಲೀಸರು ಜೀಪಿನಲ್ಲೇ ಬಿಯರ್ ಪಾರ್ಟಿಯಲ್ಲಿ ತೊಡಗಿರುವ ದೃಶ್ಯಗಳು ಇದೀಗ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿವೆ. ಇದನ್ನು ಕಂಡ ಸ್ಥಳೀಯನೊಬ್ಬ 'ನೀವು ಪೊಲೀಸರು ಕರ್ತವ್ಯದಲ್ಲಿರುವಾಗ ಜೀಪಿನಲ್ಲಿ ಕುಳಿತು ಬಿಯರ್ ಪಾರ್ಟಿ ಮಾಡುತ್ತಿದ್ದೀರಾ?' ಎಂದು ಪ್ರಶ್ನಿಸಿದಾಗ ಈ ದೃಶ್ಯಗಳನ್ನು ಮೊಬೈಲ್'ನಲ್ಲಿ ಚಿತ್ರೀಕರಿಸಲು ಮುಂದಾದಾಗ ತಬ್ಬಿಬ್ಬಾಗಿದ್ದಾಗಿದ್ದಾರೆ.

ಇದೇ ವೇಳೆ ಜೀಪಿನೊಳಗಿದ್ದ ಪೊಲೀಸ್ ಅಧಿಕಾರಿಯೊಬ್ಬ ಜೀಪಿನ ನಂಬರ್ ಗುರುತಿಸಿಟ್ಟುಕೊಳ್ಳು, ಈಗ ಇಲ್ಲಿಂದ ಹೊರಡು. ನೀನೇನು ಮಾಡುತ್ತೀಯೋ ನಾನು ನೋಡುತ್ತೇನೆ' ಎಂದಿದ್ದಾರೆ. ಮಾದ್ಯಮಗಳಲ್ಲಿ ಪ್ರಸಾರವಾದ ವರದಿಯನ್ವಯ ಿವರು ಉತ್ತರ ಪ್ರದೇಶದ ಪೊಲೀಸ್ ಇಲಾಖೆಗೆ ಸೇರಿದ ಅಧಿಕಾರಿಗಳು ಎಂದು ತಿಳಿದು ಬಂದಿದೆ.