ಅತ್ತ ಅಮೆರಿಕದಲ್ಲಿ ಬಂದೂಕುಧಾರಿ ವ್ಯಕ್ತಿಯೊಬ್ಬ ಸಂಗೀತ ಕಾರ್ಯಕ್ರಮದ ಮೇಲೆ ಗುಂಡಿನ ಮಳೆಗರೆದು 50ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದ ಸಂದರ್ಭದಲ್ಲೇ ಭಾರತದಲ್ಲಿ ಗನ್ ಲೈಸೆನ್ಸ್‌ಗೆ ಸಂಬಂಧಿಸಿದ ಮಾಹಿತಿಯೊಂದು ಹೊರಬಿದ್ದಿದೆ.

ನವದೆಹಲಿ(ಅ.03): ಅತ್ತ ಅಮೆರಿಕದಲ್ಲಿ ಬಂದೂಕುಧಾರಿ ವ್ಯಕ್ತಿಯೊಬ್ಬ ಸಂಗೀತ ಕಾರ್ಯಕ್ರಮದ ಮೇಲೆ ಗುಂಡಿನ ಮಳೆಗರೆದು 50ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದ ಸಂದರ್ಭದಲ್ಲೇ ಭಾರತದಲ್ಲಿ ಗನ್ ಲೈಸೆನ್ಸ್‌ಗೆ ಸಂಬಂಧಿಸಿದ ಮಾಹಿತಿಯೊಂದು ಹೊರಬಿದ್ದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೇಶದಲ್ಲಿ 33.69 ಲಕ್ಷ ಜನರು ಗನ್‌ಲೈಸೆನ್ಸ್ ಪಡೆದಿದ್ದು, ಅದರಲ್ಲಿ ಕರ್ನಾಟಕದವರೇ 1.13 ಲಕ್ಷ ಮಂದಿ ಇದ್ದಾರೆ. ಅತಿ ಹೆಚ್ಚು ಗನ್ ಲೈಸೆನ್ಸ್ ಹೊಂದಿರುವ ವ್ಯಕ್ತಿಗಳು ನೆಲೆಸಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ದೇಶದಲ್ಲೇ ಏಳನೇ ಸ್ಥಾನದಲ್ಲಿದೆ. ಕೇಂದ್ರ ಗೃಹ ಸಚಿವಾಲಯದ ಅಂಕಿ-ಅಂಶಗಳಲ್ಲಿ ಈ ಮಾಹಿತಿ ಇದೆ.

2016ರ ಡಿ.31ಕ್ಕೆ ಅನುಗುಣವಾಗಿ ದೇಶದಲ್ಲಿ 33 ಲಕ್ಷ ಗನ್ ಲೈಸೆನ್ಸ್ ಹೊಂದಿದವರಿದ್ದಾರಾದರೂ ಅದರಲ್ಲಿ ಸಿಂಹಪಾಲು, ಜನಸಂಖ್ಯೆಯಲ್ಲಿ ದೇಶದಲ್ಲೇ ಅತಿದೊಡ್ಡ ರಾಜ್ಯವಾಗಿರುವ ಹಾಗೂ ಕಾನೂನು- ಸುವ್ಯವಸ್ಥೆಯ ಸಮಸ್ಯೆ ಎದುರಿಸುತ್ತಿರುವ ಉತ್ತರಪ್ರದೇಶದ್ದು. ಆ ರಾಜ್ಯದಲ್ಲಿ ಅಧಿಕೃತ ಶಸ್ತ್ರಾಸ್ತ್ರ ಪರವಾನಗಿ ಪಡೆದವರ ಸಂಖ್ಯೆ 12.77 ಲಕ್ಷದಷ್ಟಿದೆ. ಕಾಶ್ಮೀರದಲ್ಲಿ 3.69 ಲಕ್ಷ ಗನ್ ಲೈಸೆನ್ಸ್‌'ದಾರರಿದ್ದಾರೆ.