ಪಣಜಿ : ಗೋವಾಗೆ ತೆರಳುವ ಪ್ರವಾಸಿಗರಿಗೆ ಇಲ್ಲಿದೆ ಬ್ಯಾಡ್ ನ್ಯೂಸ್. ನೀವು ಅಲ್ಲಿನ ಬೀಚ್ ಗೆ ತೆರಳಿ ಮದ್ಯ ಸೇವಿಸೋದು ಹಾಗೂ ಬೀಚ್ ನಲ್ಲೇ ಅಡುಗೆ ಮಾಡಿದರೆ ನಿಮಗೆ ದಂಡ ಹಾಗೂ ಜೈಲು ಶಿಕ್ಷೆ ಗ್ಯಾರಂಟಿ. 

ಗೋವಾ ಸರ್ಕಾರ ಹೊಸ ನಿಯಮ ಜಾರಿಗೆ ತರುತ್ತಿದ್ದು, ನಿಯಮ ಉಲ್ಲಂಘನೆ ಮಾಡಿದರೆ 2000 ರು. ದಂಡ ಹಾಗೂ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. 

ರಾತ್ರಿ 8 ರ ಬಳಿಕ ಮದ್ಯ ಮಾರಾಟ ಸಂಪೂರ್ಣ ನಿಷೇಧ!

ಈ ಬಗ್ಗೆ ಗೋವಾ ಸಚಿವ ಸಂಪುಟ ರಿಜಿಸ್ಟ್ರೇಶನ್ ಆಫ್ ಟೂರಿಸಮ್ ಅಂಡ್ ಟ್ರೇಡ್ ಕಾಯ್ದೆಗೆ ತಿದ್ದುಪಡಿ ತರಲು ಈಗಾಗಲೇ ಅಂಗೀಕಾರ ನೀಡಿದೆ. ಒಂದು ವೇಳೆ ಈ ನಿಯಮವನ್ನು ಉಲ್ಲಂಘನೆ ಮಾಡಿದಲ್ಲಿ ದಂಡ ಹಾಗೂ ಜೈಲು ಎರಡನ್ನೂ ಕೂಡ ಎದುರಿಸಲು ಸಜ್ಜಾಗಿರಬೇಕು.  

ಗೋವಾಗೆ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ನಿರಂತರವಾಗಿ ಭೇಟಿ ನೀಡುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ವಾಸ್ಥ್ಯ ಕಾಪಾಡುವುದು ಅತ್ಯಗತ್ಯವಾಗಿದ್ದು, ಈ  ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.