ಮುಜಾಫರ್ ನಗರ[ಜು. 12] ತನ್ನ ಮೇಲೆ ದೌರ್ಜನ್ಯಕ್ಕೆ ಮುಂದಾಗಿದ್ದ ಎಂದು ಆರೋಪಿಸಿರುವ 18 ವರ್ಷದ ಮಹಿಳಾ ಬಾಕ್ಸರ್ ಹುಡುಗನೊಬ್ಬನಿಗೆ ಹಿಗ್ಗಾ ಮುಗ್ಗಾ ಗೂಸಾ ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಘಟನಾವಳಿಯ ಚಿತ್ರಣ ನಮ್ಮ ಮುಂದೆ ಇಡುತ್ತಿದೆ. ಯುವಕನ ಟೀಶರ್ಟ್ ಹಿಡಿದು ಬಾಕ್ಸರ್ ಸರಿಯಾಗಿಯೇ ಬಾರಿಸಿದ್ದಾರೆ. ಬಾಕ್ಸರ್ ನಿಶಾ ಪ್ರವೀಣ್ ತನ್ನ ತಾಯಿಯೊಂದಿಗೆ ಆಸ್ಪತ್ರೆಗೆ ತೆರಳಿದ್ದರು. ಯುವತಿ ಕೊಟ್ಟ ಗೋಸಾಕ್ಕೆ ಯುವಕನ ತಲೆಯಿಂದ ರಕ್ತ ಸುರಿದಿದೆ.

ಮಗ, ಸೊಸೆಯಿಂದ ದಯವಿಟ್ಟು ಕಾಪಾಡಿ, ವೃದ್ಧ ದಂಪತಿ ಮೊರೆ ಆಲಿಸಿದ ಪೊಲೀಸರು!

ಉತ್ತರಾಖಂಡದ ರೋರ್ಕೆರಾದಲ್ಲಿ ಬಾಕ್ಸಿಮಘ್ ತರಬೇತಿ ಪಡೆಯುತ್ತಿರುವ ಯುವತಿ ಆತ್ಮರಕ್ಷಣೆಯ ತಂತ್ರವನ್ನು ಸರಿಯಾಗೆ ಬಳಸಿದ್ದಾರೆ. ಕಿರುಕುಳ ನೀಡುತ್ತಿದ್ದ ಯುವಕ ನಂತರ ನನ್ನ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ ಎಂದು ಯುವತಿ ಹೇಳಿದ್ದಾರೆ.