- ರಾಮ ಮಂದಿರ ನಿರ್ಮಾಣ ಮಾಡಿಯೇ ಸಿದ್ಧ: ಕೇಶವ ಪ್ರಸಾದ್ ಮೌರ್ಯ ಬಿಜೆಪಿ ಸರ್ಕಾರ ಬಂದ ಕೂಡಲೇ ರಾಮ ಮಂದೊರ ನಿರ್ಮಾಣ ಮಸೂದೆ ಮಂಡಿಸಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ
ಲಖನೌ (ಆ. 20): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಯಾವುದೇ ದಾರಿ ಸಿಗದಿದ್ದಲ್ಲಿ, ಸಂಸತ್ತಿನಲ್ಲಿ (ಉಭಯ ಸದನಗಳಲ್ಲಿ) ಬಿಜೆಪಿಗೆ ಬಹುಮತ ಬಂದಾಗ ಮಸೂದೆ ಮಂಡಿಸಿಯಾದರೂ ಮಂದಿರ ನಿರ್ಮಿಸಲಾಗುವುದು ಎಂದು
ಉತ್ತರಪ್ರದೇಶದ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ.
ಸದ್ಯ ಸಂಸತ್ತಿನ ಉಭಯ ಸದನಗಳಲ್ಲಿ ನಮಗೆ ಬಹುಮತ ಇಲ್ಲ. ಇಂಥ ವೇಳೆ ಮಸೂದೆ ತಂದರೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲದ ನಮಗೆ ಸೋಲು ಖಚಿತ. ಇದು ಪ್ರತಿಯೊಬ್ಬ ರಾಮಭಕ್ತರಿಗೂ ಗೊತ್ತು. ಹೀಗಾಗಿ ನಮಗೆ ಅಗತ್ಯ ಬಲ ಸಿಕ್ಕಾಗ ಆ ಸಮಯ ವ್ಯರ್ಥ ಮಾಡುವುದಿಲ್ಲ ಎಂದು ಹೇಳಿದ್ದಾರೆ.
