ಇಲ್ಲೊಂದು ರಾಜ್ಯ ಸರ್ಕಾರ ಪೊಲೀಸರಿಗೆ ವಿಶೇಷ ಮೀಸೆ ಭತ್ಯೆ ನೀಡುತ್ತಿದೆ. ಆಕರ್ಷಕವಾಗಿ ಮೀಸೆ ಬೆಳೆಸಿ, ಕಾಪಾಡಿಕೊಳ್ಳಲು ಈ ಭತ್ಯೆ ನೀಡುತ್ತಿದೆ.

ಲಕ್ನೋ[ಜ.19]: ಪೊಲೀಸರಿಗೆ ಸಮವಸ್ತ್ರ ಸೇರಿದಂತೆ ಇತರೆ ಕೆಲವು ಭತ್ಯೆಗಳನ್ನು ಸರ್ಕಾರ ಕೊಡುವುದು ಸಹಜ. ವಿಶೇಷವೆಂದರೆ ಉತ್ತರ ಪ್ರದೇಶದಲ್ಲಿ ರಾಜ್ಯ ಸರ್ಕಾರ ಪೊಲೀಸರಿಗೆ ವಿಶೇಷ ಮೀಸೆ ಭತ್ಯೆ ನೀಡುತ್ತಿದೆ. ಆಕರ್ಷಕವಾಗಿ ಮೀಸೆ ಬೆಳೆಸಿ, ಅದನ್ನು ಕಾಪಾಡಿಕೊಳ್ಳಲು ಮಾಸಿಕ 50 ರು. ಭತ್ಯೆ ನೀಡುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಮೀಸೆ ನಿರ್ವಹಣೆ ವೆಚ್ಚ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗೆ ಭತ್ಯೆ ಪ್ರಮಾಣವನ್ನು ಮಾಸಿಕ 50 ರು.ನಿಂದ 250 ರು.ಗೆ ಹೆಚ್ಚಿಸಿ ಎಂದು ಪೊಲೀಸ್‌ ಇಲಾಖೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆಯಂತೆ.