ಲಕ್ನೋ : ಉತ್ತರ ಪ್ರದೇಶ ಲಕೀಮ್ ಪುರ ಜಿಲ್ಲೆಯ ಪೊಲೀಸ್ ಅಧಿಕಾರಿಯೋರ್ವರು ಬಿಜೆಪಿ ಸಂಸದೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

 ಸಂಸದೆ ರೇಖಾ ವರ್ಮ ಅವರ ಬೆಂಗಾವಲು ಪಡೆಯಲ್ಲಿ ಇದ್ದ ವೇಳೆ ತಮಗೆ ಥಳಿಸಿ, ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು  ಮೊಹಮದಿ ಕೋಟ್ವಾಲಿ ಪೊಲೀಸ್ ಠಾಣೆಯ ಪೇದೆ ಶಾಮ್ ಸಿಂಗ್  ದೂರು ನೀಡಿದ್ದಾರೆ. 

ಶಾಮ್ ಸಿಂಗ್ ಅವರು ಸಂಸದೆಗೆ ಬೆಂಗಾವಲಾಗಿದ್ದ ಕಾರಿನಲ್ಲಿದ್ದರು. ಈ ವೇಳೆ ಸಿಟ್ಟಾಗಿ ನಿನ್ನ ಕರ್ತವ್ಯ ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಥಳಿಸಿದ್ದಾರೆ. ಸಾರ್ವಜನಿಕವಾಗಿ ಈ ರೀತಿ ಥಳಿಸಿರುವುದು ತಮಗೆ ಅವಮಾನವನ್ನುಂಟು ಮಾಡಿದೆ ಎಂದಿದ್ದಾರೆ. 

ಕಾರಣವಿಲ್ಲದೇ ತಮ್ಮನ್ನು ಥಳಿಸಿದ್ದು, ಸಮವಸ್ತ್ರದಲ್ಲಿದ್ದ ವೇಳೆಯೇ ಅವಮಾನಕರವಾಗಿ ನಡೆದುಕೊಂಡಿದ್ದಾರೆ. ಈ ಬಗ್ಗೆ ತಾವು ದೂರು ದಾಖಲಿಸಿದ್ದು, ನ್ಯಾಯ ದೊರೆಯುವ ವಿಶ್ವಾಸವಿದೆ ಎಂದರು.

ಪೊಲೀಸ್ ಪೇದೆ ಶಾಮ್ ಸಿಂಗ್ ದೂರಿನ ಆಧಾರದಲ್ಲಿ ಸಂಸದೆ ರೇಖಾ ವರ್ಮ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ.