ಬೆಂಗಳೂರು(ಅ.29): ದೀಪಾವಳಿ ಬಂತೆಂದರೆ ಪಟಾಕಿಗಳ ಅಬ್ಬರ ಶುರುವಾಗುತ್ತೆ. ಬೀದಿ ಬೀದಿಗಳಲ್ಲಿ ಎಲ್ಲೆಂದರಲ್ಲಿ ಪಟಾಕಿಗಳ ಸದ್ದು ಕೇಳಿಬರುತ್ತದೆ. ಇನ್ನೂ ಪಟಾಕಿ ಸಿಡಿದು ಗಾಯ ಮಾಡಿಕೊಂಡು ಆಸ್ಪತ್ರೆಗೆ ಸೇರುವವರ ಸಂಖ್ಯೆ ಏನೂ ಕಡಿಮೆ ಇಲ್ಲ. ಸಂಭ್ರಮದ ಹಬ್ಬ ಅನಾಹುತಕ್ಕೆ ಎಡೆಮಾಡದಂತೆ ಇರಲು ಸ್ವಲ್ಪ ಎಚ್ಚರಿಕೆಯಿಂದ ಹಬ್ಬ ಆಚರಿಸಿದರೆ ಉತ್ತಮ. ಪ್ರಮುಖವಾಗಿ ಪಟಾಕಿ ಸಿಡಿಸುವಾಗ ಈ ಟಿಪ್ಸ್ ಅನುಸರಿಸಿ.

1. ಪಟಾಕಿಯಿಂದ ಮಕ್ಕಳನ್ನ ದೂರ ಇಡಲು ಪ್ರಯತ್ನಿಸಿ, ಬೆಂಕಿ ಉಗುಳುವ ಕ್ರಾಕರ್`ಗಳ ಹತ್ತಿರ ಸುಳಿಯಲು ಬಿಡಬೇಡಿ
2. ಪಟಾಕಿ ಹೊಡೆಯುವ ಸ್ಥಳದಲ್ಲಿ ಒಂದು ಬಕೆಟ್ ನೀರನ್ನ ಇಟ್ಟುಕೊಳ್ಳಿ,
3. ಖಾಲಿ ಮೈದಾನದಲ್ಲಿ ಪಟಾಕಿ ಹೊಡೆದರೆ ಉತ್ತಮ
4. ಸಾರ್ವಜನಿಕರು, ಪ್ರಾಣಿ-ಪಕ್ಷಿಗಳನ್ನ ಗಮನದಲ್ಲಿಟ್ಟುಕೊಂಡು ಕಡಿಮೆ ಸದ್ದು ಮಾಡುವ ಕ್ರಾಕರ್ಸ್ ಬಳಸಿದರೆ ಉತ್ತಮ
'5. ಪಟಾಕಿ ಹೊಡೆಯುವ ಸ್ಥಳದಲ್ಲಿ ಬಹುಬೇಗ ಹೊತ್ತಿಕೊಳ್ಳುವ ವಸ್ತುಗಳನ್ನ ಿಡಬೇಡಿ
6. ಪಟಾಕಿ ಹೊಡೆಯುವ ಸಂದರ್ಭ ಕಾಟನ್ ಉಡುಪು ಧರಿಸಿ, ಸಡಿಲವಾದ ಬಟ್ಟೆ ಬೇಡ
7. ಮುಂಜಾಗ್ರತೆಯಿಂದ ಮನೆಯಲ್ಲಿ ಬರ್ನ್ ಮೆಡಿಕಲ್ ಕಿಟ್ ಇಟ್ಟುಕೊಳ್ಳಿ