ಮೆಟ್ರೋ ನಿಲ್ದಾಣದಲ್ಲಿ ಹಿಂದಿ ಹೇರಿಕೆಗೆ ಭಾರಿ ವಿರೋಧ ವ್ಯಕ್ತವಾದ ನಂತರ, ಮೆಟ್ರೋ ನಿಗಮ ನಿಲ್ದಾಣದಲ್ಲಿರುವ ಹಿಂದಿ ನಾಮಫಲಕಗಳ ತೆರವು ಮಾಡಿದೆ. ಆದರೆ ಮೆಟ್ರೋ ನಿಗಮ ಎಲ್ಲರ ಕಣ್ಣಿಗೆ ಮಣ್ಣೆರಚುವ ಕೆಲಸ ಈಗ ಬೆಳಕಿಗೆ ಬಂದಿದೆ.
ಬೆಂಗಳೂರು (ಆ.06): ಮೆಟ್ರೋ ನಿಲ್ದಾಣದಲ್ಲಿ ಹಿಂದಿ ಹೇರಿಕೆಗೆ ಭಾರಿ ವಿರೋಧ ವ್ಯಕ್ತವಾದ ನಂತರ, ಮೆಟ್ರೋ ನಿಗಮ ನಿಲ್ದಾಣದಲ್ಲಿರುವ ಹಿಂದಿ ನಾಮಫಲಕಗಳ ತೆರವು ಮಾಡಿದೆ. ಆದರೆ ಮೆಟ್ರೋ ನಿಗಮ ಎಲ್ಲರ ಕಣ್ಣಿಗೆ ಮಣ್ಣೆರಚುವ ಕೆಲಸ ಈಗ ಬೆಳಕಿಗೆ ಬಂದಿದೆ.
ಮೆಟ್ರೋ ನಿಗಮ ಕೇವಲ ಹೊರ ಭಾಗದಲ್ಲಿ ಹಿಂದಿ ನಾಮಫಲಕಗಳನ್ನ ತೆರವು ಮಾಡಿದ್ದು ನಿಲ್ದಾಣದ ಒಳಗಡೆ ಹಿಂದಿ ಭಾಷೆ ಬಳಕೆ ಮಾಡುತ್ತಿದೆ. ಭಾಷೆ ಬಳಕೆ ವಿಚಾರದಲ್ಲಿ ಅಧಿಕಾರಿಗಳು ಅಂದರ್ ಬಾಹರ್ ಆಟವಾಡುತ್ತಿದ್ದಾರಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಮೆಟ್ರೋದಲ್ಲಿ ಹಿಂದಿ ಭಾಷೆ ತೆರವು ಮಾಡುವಂತೆ ಸಿಎಂ ಕೆಂದ್ರ ಸರ್ಕಾರಕ್ಕೆ, ನಿಗಮಕ್ಕೆ ಪತ್ರ ಬರೆದಿದ್ದರು. ಹೀಗಾಗಿ ಮೆಟ್ರೋ ಅಧಿಕಾರಿಗಳು ನಿಲ್ದಾಣ ಹೊರ ಭಾಗದಲ್ಲಿರುವ ಹಿಂದಿ ನಾಮಫಲಕ ತೆರವು ಮಾಡಿ , ನಿಲ್ದಾಣದ ಒಳಗಡೆ ಹಿಂದಿ ಭಾಷೆಯನ್ನೇ ಪ್ರಮುಖವಾಗಿಸಿದೆ. ಕನ್ನಡ ಪರ ಸಂಘಟನೆಗಳ ಹೋರಾಟ, ಮಾಧ್ಯಮಗಳ ಟೀಕೆಗಳ ನಡುವೆಯೂ , ಮೆಟ್ರೋ ಅಧಿಕಾರಿಗಳು ಹಿಂದಿ ಭಾಷೇ ಮೇಲೆ ಇಟ್ಟಿರುವ ಪ್ರೇಮ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
