ನಮಗೆ ಮಿಲಿಟರ್ ಕಾರ್ಯಾಚರಣೆ ಬೇಕಾಗಿಲ್ಲ,  ಆದರೆ ಉ,ಕೊರಿಯಾವು ದ.ಕೊರಿಯಾ ಅಥವಾ ನಮ್ಮ ಸೈನಿಕರಿಗೆ ತೊಂದರೆಯುಂಟು ಮಾಡಿದರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಾಗುವುದು ಎಂದು ಟಿಲ್ಲರ್ಸನ್ ಹೇಳಿದ್ದಾರೆ.

ಸಿಯೌಲ್ (ಮಾ.17): ಉತ್ತರ ಕೊರಿಯಾವು ತನ್ನ ನೀತಿಗಳನ್ನು ತಿದ್ದಿಕೊಳ್ಳದಿದ್ದರೆ ಅದರ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸುವುದಾಗಿ ಅಮೆರಿಕಾ ಹೇಳಿದೆ.

ದ. ಕೊರಿಯಾದ ವಿದೇಶಾಂಗ ಸಚಿವ ಯುನ್ ಯುಂಗ್ಸೆ ಜತೆ ಜಂಟಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅಮೆರಿಕಾ ಸ್ಟೇಟ್ ಕಾರ್ಯದರ್ಶಿ ರೆಕ್ಸ್ ಟಿಲ್ಲರ್ಸನ್, ಅಮೆರಿಕಾದ ಸಹನಾ-ನೀತಿಯು ಅಂತ್ಯಗೊಳ್ಳುತ್ತಿದೆಯೆಂದು ಹೇಳಿದ್ದಾರೆ.

ನಮಗೆ ಮಿಲಿಟರ್ ಕಾರ್ಯಾಚರಣೆ ಬೇಕಾಗಿಲ್ಲ, ಆದರೆ ಉ,ಕೊರಿಯಾವು ದ.ಕೊರಿಯಾ ಅಥವಾ ನಮ್ಮ ಸೈನಿಕರಿಗೆ ತೊಂದರೆಯುಂಟು ಮಾಡಿದರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಾಗುವುದು ಎಂದು ಟಿಲ್ಲರ್ಸನ್ ಹೇಳಿದ್ದಾರೆ.

ಉ.ಕೊರಿಯಾ ಇತ್ತೀಚೆಗೆ ಕ್ಷಿಪಣಿಗಳನ್ನು ಪ್ರಯೋಗಿಸುತ್ತಿದೆಯಲ್ಲದೇ ಪರಮಾಣು ಪರೀಕ್ಷೆಗಳನ್ನು ನಡೆಸುವ ತಯಾರಿ ನಡೆಸುತ್ತಿದೆ. ಇದು ಉ.ಕೊರಿಯಾ ಹಾಗೂ ದ.ಕೊರಿಯಾದೊಂದಿಗೆ ಉದ್ವಿಗ್ನತೆ ಹೆಚ್ಚಿಸಿದೆ. ರೆಕ್ಸ್ ಟಿಲ್ಲರ್ಸನ್ ದ,ಕೊರಿಯಾದ 3-ದಿನಗಳ ಪ್ರವಾಸದಲ್ಲಿದ್ದಾರೆ.