ಅಮೆರಿಕ ನೌಕಾಪಡೆಯ ಎರಡು ಯುದ್ದ ನೌಕೆಗಳು ದಕ್ಷಿಣ ಚೀನಾ ಸಮುದ್ರದ ದ್ವೀಪದ ಬಳಿ ಹಾದು ಹೋಗಿವೆ ಎಂದು ಚೀನಾ ಗಂಭೀರ ಆರೋಪ ಮಾಡಿದೆ. ಅಮೆರಿಕ ಯಾವುದೇ ಪೂರ್ವಾನುಮತಿ ಇಲ್ಲದೇ ತನ್ನ ಜಲಗಡಿಯನ್ನು ಪ್ರವೇಶಿಸಿದ್ದು, ಈ ಕುರಿತು ವಿಶ್ವಸಂಸ್ಥೆಯಲ್ಲಿ ದೂರು ದಾಖಲಿಸಲಾಗುವುದು ಎಂದು ಚೀನಾ ಹೇಳಿದೆ.
ಬಿಜಿಂಗ್(ಮೇ.27): ಅಮೆರಿಕ ನೌಕಾಪಡೆಯ ಎರಡು ಯುದ್ದ ನೌಕೆಗಳು ದಕ್ಷಿಣ ಚೀನಾ ಸಮುದ್ರದ ದ್ವೀಪದ ಬಳಿ ಹಾದು ಹೋಗಿವೆ ಎಂದು ಚೀನಾ ಗಂಭೀರ ಆರೋಪ ಮಾಡಿದೆ. ಅಮೆರಿಕ ಯಾವುದೇ ಪೂರ್ವಾನುಮತಿ ಇಲ್ಲದೇ ತನ್ನ ಜಲಗಡಿಯನ್ನು ಪ್ರವೇಶಿಸಿದ್ದು, ಈ ಕುರಿತು ವಿಶ್ವಸಂಸ್ಥೆಯಲ್ಲಿ ದೂರು ದಾಖಲಿಸಲಾಗುವುದು ಎಂದು ಚೀನಾ ಹೇಳಿದೆ.
ಇತ್ತಿಚೀಗಷ್ಟೇ ಉತ್ತರ ಕೊರಿಯಾ ಜೊತೆಗಿನ ಮಾತುಕತೆಯಲ್ಲಿ ಸಹಾಯ ಮಾಡುವಂತೆ ಅಮೆರಿಕ ಅಧ್ಯಕ್ಷ ಚೀನಾ ಅಧ್ಯಕ್ಷರಿಗೆ ಮನವಿ ಮಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಎರಡು ಯುದ್ದ ವಿಮಾನಗಳು ನಮ್ಮ ಜಲಗಡಿ ಪ್ರವೇಶಿಸಿರುವುದು ವಿಶ್ವಾಸಾರ್ಹತೆಗೆ ಧಕ್ಕೆ ತರಲಿದೆ ಎಂದು ಚೀನಾ ಅಸಮಾಧಾನ ವ್ಯಕ್ತಪಡಿಸಿದೆ.
ಚೀನಾ ಮತ್ತು ಜಪಾನ್ ನಡುವಿನ ಗಡಿ ಬಿಕ್ಕಟ್ಟಿನಿಂದಾಗಿ ದಕ್ಷಿಣ ಚೀನಾ ಸಮುದ್ರದಲ್ಲಿ ಈಗಾಗಲೇ ತ್ವೇಷಮಯ ವಾತಾವರಣವಿದ್ದು, ಅಮೆರಿಕದ ಈ ನಡೆ ಸಮಸ್ಯೆಯನ್ನು ಮತ್ತಷ್ಟು ಜಠಿಲಗೊಳಿಸುತ್ತದೆ ಎಂದು ಚೀನಾ ಆರೋಪಿಸಿದೆ.
ಇನ್ನು ಅಮೆರಿಕದ ರಕ್ಷಣಾ ಇಲಾಖೆ ಈ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲವಾದರೂ ತಮ್ಮ ಸಮರ ನೌಕೆಗಳು ಚೀನಾ ಗಡಿ ಪ್ರವೇಶಿಸಿರಲು ಸಾಧ್ಯವಿಲ್ಲ ಎಂದು ಸಮರ್ಥನೆ ನೀಡಿದೆ.
