ಉಗ್ರರ ವಿರುದ್ಧ ಕ್ರಮ ಕೈಗೊಳ್ಳಿ ಅಥವಾ ನಾವು ಖುದ್ದಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಮೆರಿಕಾ ಪಾಕಿಸ್ತಾಕ್ಕೆ ಎಚ್ಚರ ನೀಡಿದೆ.

ನವದೆಹಲಿ: ಉಗ್ರರ ವಿರುದ್ಧ ಕ್ರಮ ಕೈಗೊಳ್ಳಿ ಅಥವಾ ನಾವು ಖುದ್ದಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಮೆರಿಕಾ ಪಾಕಿಸ್ತಾಕ್ಕೆ ಎಚ್ಚರ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉಗ್ರರ ನಿಗ್ರಹಕ್ಕೆ ಪಾಕಿಸ್ತಾನವು ಕ್ರಮಕೈಗೊಳ್ಳಬೇಕು, ಅಥವಾ ನಾವು ಸರ್ವಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಅಮೆರಿಕಾ ಗುಪ್ತಚರ ಇಲಾಖೆ ಮುಖ್ಯಸ್ಥ ಪಾಕಿಸ್ತಾನಕ್ಕೆ ಎಚ್ಚರಿಸಿದ್ದಾರೆ ಎಂದು ವಾಯ್ಸ್ ಆಫ್ ಅಮೆರಿಕಾ ವರದಿ ಮಾಡಿದೆ.

ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಪಾಕಿಸ್ತಾನಕ್ಕೆ ಭೇಟಿ ನೀಡಲು 2 ದಿನಗಳಿರುವಾಗಲೇ ಸಿಐಏ ಮುಖ್ಯಸ್ಥ ಮೈಕ್ ಪಾಂಪೆಓ ಈ ಹೇಳಿಕೆ ನೀಡಿದ್ದಾರೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್’ರ ಸಂದೇಶವನ್ನು ಮ್ಯಾಟಿಸ್ ಅವರು ಮೊದಲು ಪಾಕಿಸ್ತಾನಕ್ಕೆ ಸೌಮ್ಯವಾಗಿಯೇ ತಿಳಿಸಲಿದ್ದಾರೆ. ಒಂದು ವೇಳೆ ಪಾಕಿಸ್ತಾನವು ಸೂಕ್ತವಾಗಿ ಸ್ಪಂದಿಸದಿದ್ದಲ್ಲಿ, ಅಮೆರಿಕಾವು ಉಗ್ರರ ನಿಗ್ರಹಕ್ಕೆ ಸರ್ವರೀತಿಯಲ್ಲಿ ಸನ್ನದ್ಧವಾಗಿದೆ ಎಂದು ಅವರು ಹೇಳಿದ್ದಾರೆ.