ಉಗ್ರತಾಣ ಪಾಕ್‌ಗೆ ಅಮೆರಿಕದಿಂದ ಎಂಥಾ ಏಟು!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 2, Sep 2018, 5:48 PM IST
US military confirms $300m cut in aid to Pakistan
Highlights

ಉಗ್ರವಾದ ತಡೆಯಲು ನಿರಂತರವಾಗಿ ವಿಫಲವಾಗುತ್ತಿರುವ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹಿನ್ನಡೆಯಾಗಿದೆ. ಪಾಕಿಸ್ತಾನಕ್ಕೆ ನೀಡುತ್ತಿದ್ದ ಸುಮಾರು 300 ಮಿಲಿಯನ್ ಡಾಲರ್ ಮೊತ್ತದ ಭದ್ರತಾ ಆರ್ಥಿಕ ನೆರವಿಗೆ ಅಮೆರಿಕ ಕತ್ತರಿ ಹಾಕಿದೆ.

ವಾಷಿಂಗ್ ಟನ್[ಸೆ.2]  ಉಗ್ರವಾದ ತಡೆಯಲು ವಿಫಲವಾದ ಪಾಕಿಸ್ತಾನಕ್ಕೆ ದೊಡ್ಡ ಮುಖಭಂಗವಾಗಿದೆ. ಪೆಂಟಗನ್ ನಲ್ಲಿ ನಡೆದ ಮಹತ್ವದ ರಕ್ಷಣಾ ಇಲಾಖೆಯ ಸಭೆಯಲ್ಲಿ  ಅಮೆರಿಕದಿಂದ ಪಾಕಿಸ್ತಾನ ಸರ್ಕಾರಕ್ಕೆ ನೀಡಲಾಗುತ್ತಿದ್ದ 300 ಮಿಲಿಯನ್ ಡಾಲರ್ ಮೊತ್ತದ ಆರ್ಥಿಕ ನೆರವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ.

ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪೆಂಟಗನ್ ವಕ್ತಾರರಾದ ಫಿಲ್ ಸ್ಟೆವಾರ್ಟ್ ಮತ್ತು ಇಡ್ರೀಸ್ , ಉಗ್ರ ನಿಗ್ರಹ ವಿಚಾರದಲ್ಲಿ ಪಾಕಿಸ್ತಾನ ಸರ್ಕಾರದ ಪ್ರಯತ್ನಗಳು ನಿರಾಶಾದಾಯಕವಾಗಿದೆ. ಈ ಬಗ್ಗೆ ಈ ಹಿಂದೆ ಸಾಕಷ್ಟು ಬಾರಿ ಅಮೆರಿಕ ಮನವಿ ಮಾಡಿದ್ದರೂ ಹೇಳಿಕೊಳ್ಳುವಂತಹ ಪ್ರಗತಿಯಾಗಿಲ್ಲ. ಹೀಗಾಗಿ ಟ್ರಂಪ್ ಸರ್ಕಾರ ಅನಿವಾರ್ಯವಾಗಿ ಆರ್ಥಿಕ ಭದ್ರತಾ ನೆರವನ್ನು ರದ್ದುಗೊಳಿಸಿದೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಉಗ್ರರು ನೆಲೆ ಕಂಡುಕೊಂಡಿದ್ದು ಇಡೀ ಪ್ರಪಂಚಕ್ಕೆ ಮಾರಕವಾದ ಕೆಲಸ ಮಾಡುತ್ತಿದ್ದಾರೆ ಎಂದು ಅಮೆರಿಕ ಹೇಳಿದೆ. ಒಂದು ಕಡೆ ಪಾಕ್ ನಲ್ಲಿ ಹೊಸ ಸರಕಾರ ಬಂದಿದ್ದು ಇದೇ ಸಂದರ್ಭದಲ್ಲಿ ನೆರವು ಕಡಿತವಾಗಿದೆ.

loader