ಪಾಕಿಸ್ತಾನ ನೆರೆ ರಾಷ್ಟ್ರಗಳ ಮೇಲೆ ದಾಳಿ ನಡೆಸುವ ಉಗ್ರಗಾಮಿ ಬಗ್ಗುಬಡಿಯುವ ಮೂಲಕ ಪ್ರಾದೇಶಿಕ ಭದ್ರತೆಗೆ ನೇರ ಕೊಡುಗೆ ನೀಡಲಿದೆ ಎಂದು ನಂಬಿದ್ದೇವೆ ಎಂದು ಅಮೇರಿಕಾದ ವಕ್ತಾರ ಜಾನ್ ಕಿಬ್ರಿ ಹೇಳಿದ್ದಾರೆ.
ವಾಷಿಂಗ್ಟನ್(ಅ.26): ತನ್ನ ನೆಲೆಯಲ್ಲಿರುವ ಉಗ್ರಗಾಮಿಗಳನ್ನು ಮಟ್ಟ ಹಾಕುವುದರ ಜೊತೆಗೆ ಪ್ರಾದೇಶಿಕ ಸಾಮರಸ್ಯಕ್ಕೆ ಸಹಕರಿಸಬೇಕು ಎಂದು ಪಾಕಿಸ್ತಾನಕ್ಕೆ ಅಮೆರಿಕ ಎಚ್ಚರಿಕೆಯ ಕಿವಿ ಮಾತು ಹೇಳಿದೆ. ಈ ಮೂಲಕ ಭಾರತಕ್ಕೆ ಅಮೆರಿಕ ಪರೋಕ್ಷ ಬೆಂಬಲ ನೀಡಿದಂತಾಗಿದೆ.
ಪಾಕಿಸ್ತಾನ ನೆರೆ ರಾಷ್ಟ್ರಗಳ ಮೇಲೆ ದಾಳಿ ನಡೆಸುವ ಉಗ್ರಗಾಮಿ ಬಗ್ಗುಬಡಿಯುವ ಮೂಲಕ ಪ್ರಾದೇಶಿಕ ಭದ್ರತೆಗೆ ನೇರ ಕೊಡುಗೆ ನೀಡಲಿದೆ ಎಂದು ನಂಬಿದ್ದೇವೆ ಎಂದು ಅಮೇರಿಕಾದ ವಕ್ತಾರ ಜಾನ್ ಕಿಬ್ರಿ ಹೇಳಿದ್ದಾರೆ.
ನಾವು ಪಾಕಿಸ್ತಾನದಲ್ಲಿನ ಪ್ರಜಾಪ್ರಭುತ್ವದ ತತ್ವದಡಿ ಸ್ಥಾಪನೆಯಾದ ಸರ್ಕಾರಕ್ಕೆ ಬೆಂಬಲವಿದೆ. ಶಾಂತಿಯುತವಾಗಿ ಬದುಕುವ ಹಕ್ಕಿಗೂ ನಮ್ಮ ಬೆಂಬಲವಿದೆ. ಆದರೆ ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆ ಗಮನಿಸಿದಾಗ ನಾವು ಮಾತನಾಡಲೇಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಕಿಬ್ರಿ ಮಾಧ್ಯಮದವರಿಗೆ ಪ್ರತಿಕ್ರಿಯಸಿದ್ದಾರೆ.