ಜಮ್ಮು ಕಾಶ್ಮೀರ(ಸೆ.19): ಜಮ್ಮು ಮತ್ತು ಕಾಶ್ಮೀರದ ಉರಿ ನಗರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಸಾವಿನ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ದಾಳಿಯಲ್ಲಿ ಗಾಯಗೊಂಡಿದ್ದ ಮೂವರು ಭಾರತೀಯ ಯೋಧರು ಹುತಾತ್ಮರಾಗಿದ್ದು, ಗಾಯಗೊಂಡ ಯೋಧರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.
ಉರಿ ನಗರದಲ್ಲಿ ನಿನ್ನೆ ಬೆಳಗ್ಗೆ 12 ಆರ್ಮಿ ಬ್ರಿಗೇಡ್ ಸೇನಾ ಕಚೇರಿ ಆವರಣಕ್ಕೆ ನುಗ್ಗಿದ ಉಗ್ರರು ಬಾಂಬ್ ಸ್ಫೋಟಿಸಿದ್ದರು. ಈಗಾಗಲೇ ಗುಂಡಿನ ಚಕಮಕಿಯಲ್ಲಿ 17 ಯೋಧರು ಹುತಾತ್ಮರಾಗಿದ್ದರು. ಅಲ್ದೇ ಭಾರತೀಯ ಯೋಧರು ನಾಲ್ವರು ಉಗ್ರರನ್ನು ಹೊಡೆದುರುಳಿಸಿದ್ದರು. ಇನ್ನಷ್ಟು ಉಗ್ರರು ಅಡಗಿದ್ದು ಭಾರತೀಯ ಯೋಧರು ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಘಟನೆಗೆ ಎಲ್ಲೆಡೆ ಖಂಡನೆ ವ್ಯಕ್ತವಾಗಿದ್ದು, ಭಯೋತ್ಪಾದಕರ ಕೃತ್ಯಕ್ಕೆ ವಿಶ್ವಸಂಸ್ಥೆ ಅಧ್ಯಕ್ಷ ಬಾನ್ ಕೀ ಮೂನ್ ಖಂಡಿಸಿದ್ದಾರೆ.
