ಶೀರೂರು ಸಾವು: ತನಿಖೆಗೆ ಆಗ್ರಹಿಸಿದ್ದ ಕೇಮಾರು ಶ್ರೀಗಳಿಗೆ ಬೆದರಿಕೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 24, Jul 2018, 1:56 PM IST
Urging Proper Investigation of Shiruru Shri of Krishna Mutt Threat to Kemaru Shri
Highlights

ಕೇಮಾರು ಸಾಂದೀಪಿನಿ ಆಶ್ರಮದ ಈಶ ವಿಠಲದಾಸ ಸ್ವಾಮೀಜಿ, ಶೀರೂರು ಸ್ವಾಮೀಜಿ ಅವರ ಅಸಹಜ ಸಾವಿಗೆ ನ್ಯಾಯ ದೊರಕಬೇಕೆಂದು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಕೇಮಾರು ಶ್ರೀಗಳಿಗೆ ಸೋದೆ ಹಾಗೂ ಪೇಜಾವರ ಮಠದ ಆಪ್ತವರ್ಗಗಳಿಂದ ಬೆದರಿಸಿ ಬಾಯಿ ಮುಚ್ಚಿಸುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಶಂಕೆ ದಟ್ಟವಾಗುತ್ತಿದೆ.

ಉಡುಪಿ[ಜು.24]: ಶೀರೂರು ಶ್ರೀಗಳ ಅಸಹಜ ಸಾವಿನ ಬಗ್ಗೆ ಮಾತನಾಡಿದ ಕೇಮಾರು ಶ್ರೀಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಕೇಮಾರು ಸಾಂದೀಪಿನಿ ಆಶ್ರಮದ ಈಶ ವಿಠಲದಾಸ ಸ್ವಾಮೀಜಿ, ಶೀರೂರು ಸ್ವಾಮೀಜಿ ಅವರ ಅಸಹಜ ಸಾವಿಗೆ ನ್ಯಾಯ ದೊರಕಬೇಕೆಂದು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಕೇಮಾರು ಶ್ರೀಗಳಿಗೆ ಸೋದೆ ಹಾಗೂ ಪೇಜಾವರ ಮಠದ ಆಪ್ತವರ್ಗಗಳಿಂದ ಬೆದರಿಸಿ ಬಾಯಿ ಮುಚ್ಚಿಸುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಶಂಕೆ ದಟ್ಟವಾಗುತ್ತಿದೆ. ಬೆದರಿಕೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಕೇಮಾರು ಶ್ರೀಗಳು ಅಗತ್ಯಬಿದ್ದರೆ ಠಾಣೆಗೆ ದೂರು ನೀಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಉಡುಪಿ ಅಷ್ಟ ಮಠಗಳಲ್ಲಿ ಒಂದಾದ  ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಜುಲೈ 19ರಂದು ಮೃತಪಟ್ಟಿದ್ದರು. ಶ್ರೀಗಳ ಹೊಟ್ಟೆಯಲ್ಲಿ ತೀವ್ರ ರಕ್ತಸ್ರಾವವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. 

loader