ನವದೆಹಲಿ(ಜು.20): ಸುಮ್ಮನಿರಲಾರದೇ ಇರುವೆ ಬಿಟ್ಟುಕೊಂಡರು ಅಂತಾರಲ್ಲ ಅದು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರಿಗೆ ಅಕ್ಷರಶಃ ಹೋಲುತ್ತದೆ.

ಶಶಿ ತರೂರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಎರಡು ಫೋಟೋಗಳು ಇದೀಗ ಭಾರೀ ವಿವಾಧ ಸೃಷ್ಟಿಸಿವೆ. ತರೂರ್ ಶೇರ್ ಮಾಡಿರುವ ಫೋಟೋದಲ್ಲಿ ಟೇಬಲ್ ಮೇಲೆ ಇಟ್ಟಿರುವ ಭಾರತದ ರಾಷ್ಟ್ರಧ್ವಜ ತಲೆಕೆಳಗಾಗಿರುವುದು ವಿವಾದ ಸೃಷ್ಟಿಸಿದೆ.

ಗುಜರಾತ್ ಮಾಜಿ ಐಪಿಎಸ್​ ಅಧಿಕಾರಿ ಸಂಜೀವ್​ ಭಟ್​ ಕುಟುಂಬ ಸದಸ್ಯರು ಶಶಿ ತರೂರ್​ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದರ ಫೋಟೋವನ್ನು ತರೂರ್ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿ ಭಟ್ ಪರ ಬ್ಯಾಟ್ ಬೀಸಿದ್ದರು.

ಆದರೆ ತರೂರ್ ಟೇಬಲ್ ಮೇಲಿನ ರಾಷ್ಟ್ರಧ್ವಜ ತಲೆಕೆಳಗಾಗಿದ್ದು, ಇದು ನೆಟ್ಟಿಗರನ್ನು ಕೆರಳಿಸಿದೆ. ಭಟ್ ಅವರಿಗೆ ನ್ಯಾಯ ಸಿಗುವುದೋ ಇಲ್ಲವೋ ಆಮೇಲಿನ ಮಾತು. ಮೊದಲು ನೀವು ರಾಷ್ಟ್ರಧ್ವಜಕ್ಕೆ ಗೌರವ ನೀಡುವುದನ್ನು ಕಲಿತುಕೊಳ್ಳಿ ಎಂದು ತರೂರ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.