ಯುಪಿಎಸ್ಸಿ ಫಲಿತಾಂಶ ಪ್ರಕಟ:ಅನುದೀಪ್ ಪ್ರಥಮ,ರಾಜ್ಯದ 26 ಮಂದಿ ಪಾಸ್

news | Friday, April 27th, 2018
Chethan Kumar K
Highlights

ರಾಜ್ಯದಿಂದ ಈ ಬಾರಿ 26 ಮಂದಿ ಉತ್ತೀರ್ಣರಾಗಿದ್ದು ಬೀದರ್ ರಾಹುಲ್ ಶಿಂಧೆ 95 ನೇ ರ‍್ಯಾಂಕ್ ನೊಂದಿಗೆ ಹೆಚ್ಚಿನ ರಾಂಕ್ ಪಡೆದವರಲ್ಲಿ ಮೊದಲಿಗರಾಗಿದ್ದಾರೆ. ಕೀರ್ತಿ ಕಿರಣ್ (115), ಡಾ.ಟಿ.ಶುಭಮಂಗಳ(147), ಗೋಪಾಲಕೃಷ್ಣ ಬಿ(265) ವಿನೋದ್ ಪಾಟೀಲ್(294),ಸಿದ್ದಲಿಂಗಾರೆಡ್ಡಿ(346), ಉತ್ತೀರ್ಣರಾದ ಕನ್ನಡಿಗರು.

ನವದೆಹಲಿ(ಏ.27):  ಕೇಂದ್ರ ಲೋಕಸೇವಾ ಸೇವಾ ಆಯೋಗವು 2017ರ ಫಲಿತಾಂಶ ಪ್ರಕಟಿಸಿದ್ದು 990 ಮಂದಿ ಉತ್ತೀರ್ಣರಾಗಿದ್ದಾರೆ. ಹೈದರಾಬಾದ್ನ ಅನುದೀಪ್ ದುರಿಶೆಟ್ಟಿ ಮೊದಲ ರ‍್ಯಾಂಕ್ ಪಡೆದರೆ, ಅನುಕುಮಾರಿ ಹಾಗೂ ಸಚಿನ್ ಗುಪ್ತ ಪ್ರಮವಾಗಿ 2ನೇ ಹಾಗೂ 3ನೇ ಸ್ಥಾನ ಪಡೆದುಕೊಂಡಿದ್ದಾರೆ. ಮೊದಲ 25 ರ‍್ಯಾಂಕ್  ನಲ್ಲಿ 8 ಮಂದಿ ಮಹಿಳೆಯರಿರುವುದು ವಿಶೇಷ.

ರಾಜ್ಯದಿಂದ ಈ ಬಾರಿ 26 ಮಂದಿ ಉತ್ತೀರ್ಣರಾಗಿದ್ದು ಬೀದರ್ ರಾಹುಲ್ ಶಿಂಧೆ 95 ನೇ ರ‍್ಯಾಂಕ್ ನೊಂದಿಗೆ ಹೆಚ್ಚಿನ ರಾಂಕ್ ಪಡೆದವರಲ್ಲಿ ಮೊದಲಿಗರಾಗಿದ್ದಾರೆ. ಕೀರ್ತಿ ಕಿರಣ್ (115), ಡಾ.ಟಿ.ಶುಭಮಂಗಳ(147), ಗೋಪಾಲಕೃಷ್ಣ ಬಿ(265) ವಿನೋದ್ ಪಾಟೀಲ್(294),ಸಿದ್ದಲಿಂಗಾರೆಡ್ಡಿ(346), ಉತ್ತೀರ್ಣರಾದ ಕನ್ನಡಿಗರು. 

ಕಳೆದ ವರ್ಷ ಕರ್ನಾಟಕದಿಂದ 64  ಮಂದಿ ಉತ್ತೀರ್ಣರಾಗಿದ್ದು, ಕೋಲಾರದ ಕೆ.ಆರ್.ನಂದಿನಿ ಮೊದಲ  ರ‍್ಯಾಂಕ್ ಪಡೆದಿದ್ದರು. ಈ ಬಾರಿ ಐಚ್ಛಿಕ ವಿಷಯ ಕನ್ನಡ ಸಾಹಿತ್ಯ ಪಡೆದ ಒಬ್ಬರು ಉತ್ತೀರ್ಣರಾಗಿಲ್ಲ.   ಬೆಂಗಳೂರು ಮೂಲದ ಆನ್ಲೈನ್ ತರಬೇತಿ ಸಂಸ್ಥೆ ಬಾಬಾದಲ್ಲಿ ತರಬೇತಿ ಪಡೆದ 70 ಮಂದಿ ಪಾಸಾಗಿದ್ದಾರೆ.  

UPSCಯಲ್ಲಿ ಕರ್ನಾಟಕದಿಂದ ಪಾಸಾದ  26 ಮಂದಿ ಲಿಸ್ಟ್

95ನೇ ರ‍್ಯಾಂಕ್ - ರಾಹುಲ್ ಸಿಂಧೆ - ಬೀದರ್ ಜಿಲ್ಲೆ 
115ನೇ ರ‍್ಯಾಂಕ್ - ಕೀರ್ತಿ ಕಿರಣ್ ಎಚ್ ಪೂಜಾರ್ 
119ನೇ ರ‍್ಯಾಂಕ್- ಎಂ.ಶ್ವೇತಾ - ಮೈಸೂರು ಜಿಲ್ಲೆ
147ನೇ ರ‍್ಯಾಂಕ್ - ಡಾ.ಟಿ.ಶುಭ ಮಂಗಳಾ - ಬೆಂಗಳೂರು ನಗರ  
160ನೇ ರ‍್ಯಾಂಕ್- ಸಿ.ವಿಂಧ್ಯಾ - ತುಮಕೂರು ಜಿಲ್ಲೆ
194ನೇ ರ‍್ಯಾಂಕ್ - ಕೃತಿಕಾ - ಮೈಸೂರು ಜಿಲ್ಲೆ
211ನೇ ರ‍್ಯಾಂಕ್ - ಪೃಥ್ವಿಕ್ ಶಂಕರ್ - ಮಂಡ್ಯ ಜಿಲ್ಲೆ
265ನೇ ರ‍್ಯಾಂಕ್ - ಗೋಪಾಲಕೃಷ್ಣ ಬಿ - ಬೆಂಗಳೂರು ನಗರ   
294ನೇ ರ‍್ಯಾಂಕ್- ವಿನೋದ್ ಪಾಟೀಲ್.ಎಚ್.
324ನೇ ರ‍್ಯಾಂಕ್ - ಎಂ.ಪುನೀತ್ ಕುಟ್ಟಯ್ಯ - ಕೊಡಗು ಜಿಲ್ಲೆ 
346ನೇ ರ‍್ಯಾಂಕ್ - ಸಿದ್ದಲಿಂಗಾರೆಡ್ಡಿ ಪಾಟೀಲ್ (ಹಾಲಿ KAS)-ರಾಯಚೂರು
434ನೇ ರ‍್ಯಾಂಕ್- ಸುದರ್ಶನ್ ಭಟ್ - ಉತ್ತರ ಕನ್ನಡ ಜಿಲ್ಲೆ
478ನೇ ರ‍್ಯಾಂಕ್ - ಎನ್.ವೈ.ವೃಶಾಂಕ್ - ಬೆಂಗಳೂರು ನಗರ 
531ನೇ ರ‍್ಯಾಂಕ್- ಎಸ್.ಬಿ.ಅಭಿಲಾಷ್
563ನೇ ರ‍್ಯಾಂಕ್ - ನಿಖಿಲ್ ಡಿ ನಿಪ್ಪಾಣಿಕರ್
575ನೇ ರ‍್ಯಾಂಕ್ - ಟಿ.ಎನ್.ನಿತನ್ ರಾಜ್ 
652ನೇ ರ‍್ಯಾಂಕ್ - ಸಚಿನ್.ಕೆ.
654ನೇ ರ‍್ಯಾಂಕ್ - ಪ್ರೀತಮ್.ಎಸ್.
657ನೇ ರ‍್ಯಾಂಕ್ - ಬಿ.ಸಿ.ಹರೀಶ್ - ತುಮಕೂರು ಜಿಲ್ಲೆ 
666ನೇ ರ‍್ಯಾಂಕ್ - ಆರ್.ವಿಜಯೇಂದ್ರ - ಕೋಲಾರ ಜಿಲ್ಲೆ 
784ನೇ ರ‍್ಯಾಂಕ್- ಎಸ್.ಎಂ.ಶಿವರಾಜ್ - ವಿಜಯಪುರ 
805ನೇ ರ‍್ಯಾಂಕ್ - ಸ್ಪರ್ಶ ನೀಲಾಂಗಿ
913ನೇ ರ‍್ಯಾಂಕ್- ಆರ್.ಸಿ.ಹರ್ಷವರ್ಧನ್
930ನೇ ರ‍್ಯಾಂಕ್ - ವೆಂಕಟೇಶ್ ನಾಯಕ್
933ನೇ ರ‍್ಯಾಂಕ್ - ಪಿ.ಪವನ್
958ನೇ ರ‍್ಯಾಂಕ್- ಮಹೇಶ್ ವಡ್ಡೆ 

  

Comments 0
Add Comment

  Related Posts

  Fake IAS Officer Arrested

  video | Friday, March 30th, 2018

  Hooligan by MLA supporters in KR Pooram

  video | Wednesday, January 24th, 2018

  Thieves stole IAS Office House

  video | Friday, December 29th, 2017

  Fake IAS Officer Arrested

  video | Friday, March 30th, 2018
  Chethan Kumar K