ಉಕ್ಕಿನ ಮೇಲ್ಸೇತುವೆ ಕುರಿತ ಸಭೆಯನ್ನ ಬಹಿಷ್ಕರಿಸಿ ಶಾಸಕ ಗೋಪಾಲಯ್ಯ ಹೊರ ನಡೆದಿದ್ದಾರೆ. ಸಭೆ ಆರಂಭವಾಗುತ್ತಿದ್ದಂತೆ ಗೋಪಾಲಯ್ಯ, ಕಂಠೀರವ ಸ್ಟುಡಿಯೋ ಬಳಿ ಅಂಡರ್ಪಾಸ್'ಗಾಗಿ ಭೂಸ್ವಾಧೀನ ಮಾಡಿಕೊಂಡಿದ್ದ ಬಿಡಿಎ, 3 ವರ್ಷವಾದರೂ ಭೂಮಿ ನೀಡಿದ್ದ ಮಂಗಳಮ್ಮ ಎಂಬುವರಿಗೆ ಪರಿಹಾರ ನೀಡಿರಲಿಲ್ಲ. ಇದರಿಂದ ತೀವ್ರ ಮನನೊಂದು ಮಂಗಳಮ್ಮ ನಿನ್ನೆ ಬಿಡಿಎ ಕಚೇರಿ ಆವರಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಶಾಸಕ ಗೋಪಾಲಯ್ಯ, ಮಂಗಳಮ್ಮ ಮೃತಪಟ್ಟರೆ ರಾಜ್ ಕುಮಾರ್ ಕತ್ರಿಯೇ ಕಾರಣ ಎಂದು ಆರೋಪಿಸಿದರು. ಈ ವೇಳೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗೋಪಾಲಯ್ಯರನ್ನು ಸಮಾಧಾನ ಪಡಿಸಲು ಯತ್ನಿಸಿದ್ರು.. ಆದ್ರೆ ಅಸಮಾಧಾನಗೊಳ್ಳದ ಗೋಪಾಲಯ್ಯ ಕೂಡಲೇ ಪರಿಹಾರ ನೀಡದಿದ್ದರೆ ಉಪವಾಸ ಕೂರುವ ಬೆದರಿಕೆ ಹಾಕಿದ್ದರು.
ಬೆಂಗಳೂರು(ಅ.25): ಉಕ್ಕಿನ ಮೇಲ್ಸೇತುವೆ ಕುರಿತ ಸಭೆಯನ್ನ ಬಹಿಷ್ಕರಿಸಿ ಶಾಸಕ ಗೋಪಾಲಯ್ಯ ಹೊರ ನಡೆದಿದ್ದಾರೆ. ಸಭೆ ಆರಂಭವಾಗುತ್ತಿದ್ದಂತೆ ಗೋಪಾಲಯ್ಯ, ಕಂಠೀರವ ಸ್ಟುಡಿಯೋ ಬಳಿ ಅಂಡರ್ಪಾಸ್'ಗಾಗಿ ಭೂಸ್ವಾಧೀನ ಮಾಡಿಕೊಂಡಿದ್ದ ಬಿಡಿಎ, 3 ವರ್ಷವಾದರೂ ಭೂಮಿ ನೀಡಿದ್ದ ಮಂಗಳಮ್ಮ ಎಂಬುವರಿಗೆ ಪರಿಹಾರ ನೀಡಿರಲಿಲ್ಲ.
ಇದರಿಂದ ತೀವ್ರ ಮನನೊಂದು ಮಂಗಳಮ್ಮ ನಿನ್ನೆ ಬಿಡಿಎ ಕಚೇರಿ ಆವರಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಶಾಸಕ ಗೋಪಾಲಯ್ಯ, ಮಂಗಳಮ್ಮ ಮೃತಪಟ್ಟರೆ ರಾಜ್ ಕುಮಾರ್ ಕತ್ರಿಯೇ ಕಾರಣ ಎಂದು ಆರೋಪಿಸಿದರು. ಈ ವೇಳೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗೋಪಾಲಯ್ಯರನ್ನು ಸಮಾಧಾನ ಪಡಿಸಲು ಯತ್ನಿಸಿದ್ರು.. ಆದ್ರೆ ಅಸಮಾಧಾನಗೊಳ್ಳದ ಗೋಪಾಲಯ್ಯ ಕೂಡಲೇ ಪರಿಹಾರ ನೀಡದಿದ್ದರೆ ಉಪವಾಸ ಕೂರುವ ಬೆದರಿಕೆ ಹಾಕಿದ್ದರು.
ಈ ವೇಳೆ ಮಧ್ಯ ಪ್ರವೇಶಿಸಿದ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಪರಿಹಾರ ಕೊಡಿಸುವ ಭರವಸೆ ನೀಡಿದ್ರು. ಜಾರ್ಜ್ ಭರವಸೆ ನೀಡಿದರೂ ಗೋಪಾಲಯ್ಯ ಸಮಾಧಾನಗೊಳ್ಳದೆ ಇದು ಪರಿಹಾರದ ಪ್ರಶ್ನೆ ಅಲ್ಲ, ಗೌರವದ ಪ್ರಶ್ನೆ ಎಂದು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.
