ವಿವಿಧ ಪಕ್ಷದವರು ಆದಾಯ ತೆರಿಗೆ ದಾಳಿಯ ಬಗ್ಗೆ ತಮ್ಮದೆ ವಿವರಣೆ ನೀಡಿದ್ದಾರೆ. ಈ ನಡುವೆ ನಟ ಉಪೇಂದ್ರ ಕೂಡ ಟ್ವಿಟರ್'ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಡಿಕೆಶಿ ಮನೆ ಮೇಲಿನ ಐಟಿ ರೇಡ್ ಇಂದು ಮುಗಿದಿದೆ. ಇನ್ನು ಕೆಲವು ದಿನಗಳಲ್ಲಿ ಇದರ ಸಂಪೂರ್ಣ ವರದಿ ಲಭ್ಯವಾಗಲಿದೆ. ವಿವಿಧ ಪಕ್ಷದವರು ಆದಾಯ ತೆರಿಗೆ ದಾಳಿಯ ಬಗ್ಗೆ ತಮ್ಮದೆ ವಿವರಣೆ ನೀಡಿದ್ದಾರೆ. ಈ ನಡುವೆ ನಟ ಉಪೇಂದ್ರ ಕೂಡ ಟ್ವಿಟರ್'ನಲ್ಲಿ ಪ್ರತಿಕ್ರಿಯಿಸಿದ್ದಾರೆ.
'ಆದಾಯ ತೆರಿಗೆ ಇಲಾಖೆ ದಾಳಿಗಳನ್ನು ವಿಡಿಯೋ ರೆಕಾರ್ಡ್ ಮಾಡಿ ಕೊಂಡು ಸಾರ್ವಜನಿಕರು ವೀಕ್ಷಿಸುವಂತೆ ಬಿಡುಗಡೆಗೊಳಿಸಬೇಕು. ಜನರಿಗೆ ಸತ್ಯವನ್ನು ತಿಳಿದುಕೊಳ್ಳುವ ಹಕ್ಕಿದೆ. ವಿಡಿಯೋ ಪ್ರದರ್ಶಿಸುವುದಕ್ಕೆ ಯಾಕೆ ಅವಕಾಶ ಕೊಡಬಾರದು' ಎಂದು ಪ್ರಶ್ನಿಸಿದ್ದಾರೆ.
