ಬೆಂಗಳೂರು, [ಮಾ .10]: ವ್ಯಕ್ತಿವೋರ್ವನಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ರಾತ್ರೋರಾತ್ರಿ ಜೆಡಿಎಸ್ ಮುಖಂಡ ಅಲ್ತಾಫ್ ಖಾನ್​ನನ್ನು ಬಂಧಿಸಿ ಜಾಮೀನ ಮೇಲೆ ಬಿಡುಗಡೆ ಮಾಡಲಾಗಿದೆ. 

ಜೆಡಿಎಸ್​ ಮುಖಂಡ ಅಲ್ತಾಫ್​ ಖಾನ್​ ಬಿಡುಗಡೆ ಆಗಿರುವವರು. ಅಲ್ತಾಫ್​ ಹೋಟೆಲ್​ಗೆ ನುಗ್ಗಿ ವ್ಯಕ್ತಿವೋರ್ವನಿಗೆ ಬೆದರಿಕೆ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಈ ಹಿನ್ನೆಲೆ ಉಪ್ಪಾರಪೇಟೆ ಪೊಲೀಸರು ಶನಿವಾರ ತಡರಾತ್ರಿ ಅಲ್ತಾಫ್ ಖಾನ್ ಬಂಧಿಸಿ, ತಡರಾತ್ರಿವರೆಗೆ ವಿಚಾರಣೆ ನಡೆಸಿ ಬಳಿಕ ನ್ಯಾಯಾಧಿಶರ ನಿವಾಸಕ್ಕೆ ಹಾಜರು ಪಡಿಸಿದದ್ದರು.

ಈ ವೇಳೆ ನ್ಯಾಯಾಧೀಶರ ಸಮ್ಮುಖದಲ್ಲೇ ಜಾಮೀನು ಪಡೆದು ಅಲ್ತಾಫ್ ಖಾನ್ ರಿಲೀಸ್ ಆಗಿದ್ದಾನೆ.‌  ಅಲ್ತಾಫ್ ಖಾನ್ ಬಂಧನದ ಹಿಂದೆ ಮೈತ್ರಿ ಸರ್ಕಾರದ ಪ್ರಭಾವಿ ಸಚಿವರೊಬ್ಬರ  ಕೈವಾಡವಿದೆ ಎನ್ನುವುದನ್ನು ಅಲ್ತಾಪ್ ಖಾನ್ ಬೆಂಬಲಗರು ಮಾಹಿತಿ ನೀಡಿದ್ದಾರೆ.