ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್‌ಟಿ ಕುರಿತು ಜನರಲ್ಲಿ ಉಂಟಾದ ಗೊಂದಲ ಇನ್ನೂ ಬಗೆಹರೆದಿಲ್ಲ. ಆದ್ರೆ ಸ್ಟಾಂಡಲ್​ವುಡ್​ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಮಾತ್ರ ಜಿಎಸ್​ಟಿ ಪರ ಬ್ಯಾಟಿಂಗ್ ಬೀಸಿದ್ದಾರೆ.

ಬೆಂಗಳೂರು(ಜು.14): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್‌ಟಿ ಕುರಿತು ಜನರಲ್ಲಿ ಉಂಟಾದ ಗೊಂದಲ ಇನ್ನೂ ಬಗೆಹರೆದಿಲ್ಲ. ಆದ್ರೆ ಸ್ಟಾಂಡಲ್​ವುಡ್​ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಮಾತ್ರ ಜಿಎಸ್​ಟಿ ಪರ ಬ್ಯಾಟಿಂಗ್ ಬೀಸಿದ್ದಾರೆ.

Scroll to load tweet…

ತಮ್ಮ ಟ್ವಿಟ್ಟರ್ ಪೇಜ್​'ನಲ್ಲಿ ಟ್ವೀಟ್ ಮಾಡಿರುವ ಉಪ್ಪಿ, ನೋಟ್ ಬ್ಯಾನ್ ಹಾಗೂ ಜಿಎಸ್‌ಟಿ ದೇಶದಲ್ಲಿರುವ ಎಲ್ಲಾ ಜನರಿಗೂ ಉಚಿತ ಶಿಕ್ಷಣ ಹಾಗೂ ಮುಕ್ತ ಆರೋಗ್ಯಕ್ಕೆ ಕಾರಣವಾಗಲಿದೆ ಎಂದಿದ್ದಾರೆ. ಇದಿಷ್ಟೇ ಅಲ್ಲ ನೋಟು ರದ್ಧತಿಯೂ ಉತ್ತಮ ಕ್ರಮವಾಗಿದ್ದು ಕಪ್ಪು ಹಣಕ್ಕೆ ಬ್ರೇಕ್​ ಬೀಳಲಿದೆ ಅಂತಾ ಪ್ರಧಾನಿ ಮೋದಿ ಪರ ನಟ ಉಪೇಂದ್ರ ಬ್ಯಾಟಿಂಗ್ ಮಾಡಿದ್ದಾರೆ.