ಹಿರೇಮಠ್ ಕೋರ್ಟಿ'ಗಿಂತ ದೊಡ್ಡವರೇ?
ಧಾರವಾಡ/ಬೆಳಗಾವಿ(ಡಿ.12): ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ(ಕೆಪಿಜೆಪಿ) ಸಂಸ್ಥಾಪಕ ಉಪೇಂದ್ರ ಅವರು ರೈತರ ಜಮೀನಿನಲ್ಲಿ ರೆಸಾರ್ಟ್ ನಿರ್ಮಿಸಿದ್ದು ಅದನ್ನು ರೈತರಿಗೆ ಮರಳಿಸುವಂತೆ ಸಲಹೆ ನೀಡಿದ್ದರೂ ಅವರು ಮೌನವಾಗಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಉಪೇಂದ್ರ ಈ ಕುರಿತಾಗಿ ನ್ಯಾಯಾಲಯದ ತೀರ್ಪು ನಮ್ಮ ಪರವಾಗಿಯೇ ಬಂದಿದ್ದು, ಹಿರೇಮಠ ನ್ಯಾಯಾಲಯಕ್ಕಿಂತ ದೊಡ್ಡವರೇ ಎಂದು ತಿರುಗೇಟು ನೀಡಿದ್ದಾರೆ.
