ಫೋನ್‌ನಲ್ಲಿ ಕೋರಿದರೂ ಉಪ್ಪಿ ಪಕ್ಷದ ಟಿಕೆಟ್ ಸಿಗುತ್ತೆ!

First Published 1, Feb 2018, 7:10 PM IST
Upendra Partys Ticket Available Over The Phone Call
Highlights
  • ‘ಪಕ್ಷದ ಸದಸ್ಯರಾಗಬೇಕಿಲ್ಲ, ನೇರವಾಗಿ ಮುಂಬರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಯಾಗಿ!’
  • ಅದಕ್ಕಾಗಿ ಅಂಚೆ, ಇ-ಮೇಲ್, ದೂರವಾಣಿ ಕರೆ ಅಥವಾ ನೇರವಾಗಿ ಅರ್ಜಿಯನ್ನೂ ಆಹ್ವಾನಿಸಿದೆ!

ಮಂಗಳೂರು: ‘ಪಕ್ಷದ ಸದಸ್ಯರಾಗಬೇಕಿಲ್ಲ, ನೇರವಾಗಿ ಮುಂಬರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಯಾಗಿ!’ ಚುನಾವಣೆ ಟಿಕೆಟ್‌ಗಾಗಿ ವಿವಿಧ ಪಕ್ಷಗಳಲ್ಲಿ ಮೇಲಾಟ ನಡೆಯುತ್ತಿರುವ ಈ ದಿನಗಳಲ್ಲಿ ಹೀಗೊಂದು ಅಚ್ಚರಿಯ ಆಹ್ವಾನವನ್ನು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ) ನೀಡಿದೆ.

ಅದಕ್ಕಾಗಿ ಅಂಚೆ, ಇ-ಮೇಲ್, ದೂರವಾಣಿ ಕರೆ ಅಥವಾ ನೇರವಾಗಿ ಅರ್ಜಿಯನ್ನೂ ಆಹ್ವಾನಿಸಿದೆ! ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಸಾರ್ವಜನಿಕ ಸಂಪರ್ಕಾಧಿಕಾರಿ ತುಟ್ಟೀಕೆರೆ ಮಲ್ಲೇಶ್, ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲೂ ಪಕ್ಷದ ವತಿಯಿಂದ ಅಭ್ಯರ್ಥಿಗಳನ್ನು ನಿಲ್ಲಿಸಲಾಗುವುದು.

ದಕ್ಷಿಣ ಕನ್ನಡದ ಎಲ್ಲ ಕ್ಷೇತ್ರಗಳಲ್ಲೂ ಕಣಕ್ಕಿಳಿಯಲಿದ್ದಾರೆ. ಅಭ್ಯರ್ಥಿ ಸ್ಥಾನಕ್ಕೆ ನಿಲ್ಲಲು ಈಗಾಗಲೇ ಸಾವಿರಾರು ಅರ್ಜಿಗಳು ಬಂದಿವೆ. ಇನ್ನೂ ಅರ್ಜಿ ಸಲ್ಲಿಸಲು ಬಯಸು ವವರು ದೂ.ಸಂಖ್ಯೆ 9845 114705 ಅಥವಾ 9986603226 ಸಂಪರ್ಕಿಸಬಹುದು ಎಂದರು.

ಎಲ್ಲ ಅರ್ಜಿಗಳನ್ನು ಕ್ರೋಢೀಕರಿಸಿ ಮುಂದಿನ 2,3 ವಾರದೊಳಗೆ ಪರಿಶೀಲಿಸಿ ಫೆಬ್ರವರಿ 3 ಅಥವಾ 4ನೇ ವಾರದೊಳಗೆ ಎಲ್ಲ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು.

loader