ಮತ್ತೆ ಇದೀಗ ಎನ್ ಡಿಎ ಮೈತ್ರಿ ಕೂಟದಲ್ಲಿ ಬಿರುಕೊಂಡು ಕಾಣಿಸಿಕೊಂಡಿದೆ. ತಮ್ಮ ಪಕ್ಷದ ಶಾಸಕರೊಬ್ಬರನ್ನು ಜೆಡಿಯುಗೆ ಸೆಳೆಯಲು ನಿತೀಶ್ ಕುಮಾರ್ ಯತ್ನಿಸಿದ್ದಾರೆ ಎಂದು ಕೇಂದ್ರ ಸಚಿವ ಹಾಗೂ ರಾಷ್ಟ್ರೀಯ ಲೋಕ ಸಮತಾ ಪಕ್ಷದ ಅಧ್ಯಕ್ಷ ಉಪೇಂದ್ರ ಕುಶ್ವಾಹಾ ಆರೋಪಿಸಿದ್ದಾರೆ. 

ಪಟನಾ: ಬಿಹಾರ ಎನ್‌ಡಿಎಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ತಮ್ಮ ಪಕ್ಷದ ಶಾಸಕರೊಬ್ಬರನ್ನು ಜೆಡಿಯುಗೆ ಸೆಳೆಯಲು ನಿತೀಶ್ ಕುಮಾರ್ ಯತ್ನಿಸಿದ್ದಾರೆ ಎಂದು ಕೇಂದ್ರ ಸಚಿವ ಹಾಗೂ ರಾಷ್ಟ್ರೀಯ ಲೋಕ ಸಮತಾ ಪಕ್ಷದ ಅಧ್ಯಕ್ಷ ಉಪೇಂದ್ರ ಕುಶ್ವಾಹಾ ಆರೋಪಿಸಿದ್ದಾರೆ. 

Add Asianetnews Kannada as a Preferred SourcegooglePreferred

ಈ ಸಂಬಂಧ ಹಾಗೂ ಸೀಟು ಹಂಚಿಕೆ ಬಗ್ಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾರನ್ನು ಭೇಟಿಯಾಗಲು ನಿರ್ಧರಿಸಿರುವುದಾಗಿಯೂ ಹೇಳಿದ್ದಾರೆ.

ಆರ್‌ಎಲ್‌ಎಸ್‌ಪಿ ಶಾಸಕ ಸುಧಾಂಶು ಶೇಖರ್ ಇತ್ತೀಚೆಗೆ ಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಅವರನ್ನು ಭೇಟಿಯಾಗಿದ್ದು, ಜೆಡಿಯು ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಿತೀಶ್ ಪಕ್ಷಗಳನ್ನು ಒಡೆಯುವ ಕಾರ್ಯದಲ್ಲಿ ನಿಪುಣರಾಗಿದ್ದು, ತಮ್ಮ ಹೋರಾಟ ಮುಂದುವರಿಸುವುದಾಗಿ ಕುಶ್ವಾಹಾ ಟ್ವೀಟ್ ಮಾಡಿದ್ದಾರೆ.