ಲಕ್ನೋ[ಆ.21]: ಪತಿ-ಪತ್ನಿಯರ ನಡುವಿನ ವಿಚ್ಛೇದನ ಕಾರಣಗಳನ್ನು ಕೇಳಿದ್ರೆ, ಎಂಥವರೂ ಹೌಹಾರುವ ಸ್ಥಿತಿ ನಿರ್ಮಾಣವಾಗಿದೆ.

ಹೌದು, ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ಎಂಬಂತೆ, ಉತ್ತರ ಪ್ರದೇಶದ ಲಖನೌ ಸಿವಿಲ್‌ ಕೋರ್ಟ್‌ ಆವರಣದಲ್ಲಿ ತಾನು ಕೊಟ್ಟಚ್ಯೂಯಿಂಗ್‌ ಗಮ್‌ ತಿನ್ನಲು ನಿರಾಕರಿಸಿದಳೆಂಬ ಕ್ಷುಲ್ಲಕ ಕಾರಣಕ್ಕೆ ಪತಿ ರಾಯನೋರ್ವ ಪತ್ನಿಗೆ ತ್ರಿವಳಿ ತಲಾಖ್‌ ಮೂಲಕ ವಿಚ್ಛೇದನ ನೀಡಿದ ವಿಚಿತ್ರ ಘಟನೆ ಸಂಭವಿಸಿದೆ.

ತ್ರಿವಳಿ ತಲಾಖ್‌ಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಘಿ ಇಲ್ಲಿ ಕ್ಲಿಕ್ಕಿಸಿ

ತನ್ನ ಪತಿಯ ಸಂಬಂಧಿಕರ ವಿರುದ್ಧ ತಾನು ದಾಖಲಿಸಿದ ವರದಕ್ಷಿಣೆ ಕಿರುಕುಳ ಕೇಸ್‌ ವಿಚಾರಣೆಗೆ ಮಹಿಳೆ ಆಗಮಿಸಿದ್ದಳು. ಆಗ ಪತ್ನಿ ಚ್ಯೂಯಿಂಗ್‌ ಗಮ್‌ ತಿನ್ನಲು ನಿರಾಕರಿಸಿದ್ದಕ್ಕೆ, ಕ್ರೋಧಗೊಂಡ ಪತಿ, ಅಲ್ಲಿಯೇ ಕಾನೂನು ಪ್ರಕಾರ ಅಪರಾಧವಾದ ತ್ರಿವಳಿ ತಲಾಖ್‌ ನೀಡಿದ್ದಾನೆ.